ಚಿತ್ರದುರ್ಗ: ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಆರೋಗ್ಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಅಂಗವಾಗಿ ಆಡುಮಲ್ಲೇಶ್ವರ ಕಿರು ಮೃಗಾಲಯದ ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿದರು. ಉಪ ವಲಯ ಆರಣ್ಯಾಧಿಕಾರಿ ವೆಂಕಟೇಶನಾಯ್ಕ, ಡಾ.ಮಂಜರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೈಗಪ್ಪ, ಜಾನಕಿ, ತ್ರಿವೇಣಿ, ಲಕ್ಷ್ಮೀದೇವಿ, ಸಲ್ಮಾನ್‌ಖಾನ್, ಶಂಕರಮೂರ್ತಿ, ಶ್ರೀನಿವಾಸ, ಮಾರುತಿ, ನಾಗರಾಜ್, ರವೀಂದ್ರ ಮತ್ತಿತರರು ಇದ್ದರು.