ಕಲಬುರಗಿ: ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವ ನಿಮಿತ್ತ ಮಾ.೨೦ರಿಂದ ೨೩ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ಮಾ.೨೦ ಮತ್ತು ೨೧ರಂದು ಸಂಜೆ ೬ಕ್ಕೆ ನಗರದ ಜಗತ್ ವೃತ್ತದ ಸಮೀಪದ ಬಸವ ಮಂಟಪದಲ್ಲಿ ರೇಣುಕಾಚಾರ್ಯರ ಸಮಾಜೋಧಾರ್ಮಿಕ ಕೊಡುಗೆ ಕುರಿತು ಬೀದರ್‌ನ ಗೋರ್ಟಾದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಉಪನ್ಯಾಸ ನೀಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.೨೨ರಂದು ಸಂಜೆ ೬ಕ್ಕೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿ, ರೇಣುಕಾಚಾರ್ಯರ ಕುರಿತು ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.
ಮಾ.೨೩ರಂದು ಬೆಳಗ್ಗೆ ೮ಕ್ಕೆ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಜಿ¯್ಲÁಡಳಿತ ಮತ್ತು ಜಗದ್ಗುರು ರೇಣುಕಾಚಾರ್ಯ ಜಿ¯್ಲÁ ಜಯಂತ್ಯುತ್ಸವ ಸಮಿತಿಯಿಂದ ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ನಡೆಯಲಿದೆ.
ಪ್ರಮುಖರಾದ ರಾಚೋಟಯ್ಯ ಹಿರೇಮಠ, ಅನ್ನಪೂರ್ಣ ಹಿರೇಮಠ, ರುದ್ರಯ್ಯ ಹಿರೇಮಠ, ವಿ.ಬಿ.ಮಠಪತಿ, ರುದ್ರಮುನಿ ಸ್ವಾಮಿ ಕೊಂಚೂರ, ಸತೀಶ ಸ್ವಾಮಿ, ಮಹೇಶ್ವರಯ್ಯ ಸ್ವಾಮಿ ಇತರರಿದ್ದರು.
ಬಾಕ್ಸ್
೨೩ರಂದು ಅದ್ದೂರಿ ಮೆರವಣಿಗೆ
ರೇಣುಕಾಚಾರ್ಯ ಜಿ¯್ಲÁ ಜಯಂತ್ಯುತ್ಸವ ಸಮಿತಿಯಿಂದ ಮಾ.೨೩ರಂದು ಬೆಳಗ್ಗೆ ೮.೩೦ರಿಂದ ನಗರದ ಕಿರಾಣಾ ಬಜಾರ್‌ದಿಂದ ಡಾ.ಎಸ್.ಎಂ.ಪAಡಿತ ರಂಗಮAದಿರದವರೆಗೆ ಎಂಟು ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಕಂಚಿನ ಮೂರ್ತಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ೧೦೦೮ ಕುಂಭ ಮೇಳ, ವೀರಗಾಸೆ, ಡೋಳ್ಳು ಕುಣಿತ, ನಾಸಿಕ್ ಡೋಲ್, ಭಜನಾ ಮಂಡಳಿಗಳು ಭಾಗವಹಿಸಲಿವೆ. ರಂಗಮAದಿರದಲ್ಲಿ ಸಾಧಕರಿಗೆ ಸನ್ಮಾನ, ಉಪನ್ಯಾಸ ನಡೆಯ