ಜಿಲ್ಲೆ

ರೇಣುಕಾಯಲ್ಲಮ್ಮ ದೇವಿ ಜಾತ್ರೆ 24ಕ್ಕೆ

Chitradurga - Desk - Pranav Kumar

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇಗುಲದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಫೆ. 24ರಂದು 77ನೇ ವರ್ಷದ ದೇವಿಯ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ರೇಣುಕಾಯಲ್ಲಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇವೆ ನೆರವೇರಲಿದೆ. ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ಸಮರ್ಪಿಸಬಹುದು.

ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಪೂಜೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ದೇಗುಲದ ಮುಖ್ಯಾಧಿಕಾರಿ ಎಲ್.ತುಕಾರಾಮ ಚವ್ಹಾಣ್ ಕೋರಿದ್ದಾರೆ.