ಔರಾದ್ ಮಿನಿ ವಿಧಾನಸೌಧದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಪ್ರಾಚಾರ್ಯ ಓಂಪ್ರಕಾಶ ದಡ್ಡೆ, ಶಿವರಾಜ ಅಲ್ಮಾಜೆ, ರವಿ ಬಂಬುಳಗೆ, ಅಮಿತ, ಅನಿಲ, ಶರಣಪ್ಪ ಪಂಚಾಕ್ಷರಿ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ದಯಾನಂದ ಸ್ವಾಮಿ, ಸಚ್ಚಿದಾನಂದ ಸ್ವಾಮಿ, ವಿಜಯಕುಮಾರ ಸ್ವಾಮಿ, ಮಹೇಶ ಸ್ವಾಮಿ, ಶ್ರೀಕಾಂತ ಅಲ್ಮಾಜೆ, ಪ್ರಭು ಲದ್ದೆ, ವಿಶ್ವನಾಥ ಬಿರಾದಾರ, ಸಂತೋಷ ಚಾಂಡೆಶ್ವರೆ ಇದ್ದರು. 
ಜಿಲ್ಲೆ

ರೇಣುಕಾಚಾರ್ಯರ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಿ

ಔರಾದ್: ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಪ್ರಸ್ತುತ ಕಾಲಕ್ಕೆ ಅವಶ್ಯಕವಾಗಿವೆ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಶ್ರೀ ರೇಣುಕಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಪಂಚ ಪೀಠಗಳನ್ನು ಸ್ಥಾಪಿಸಿ ಮನುಕುಲವನ್ನು ಉದ್ದರಿಸಿದ ಮಹಾನ ಸಂತರು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬದುಕಿದಾಗ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಮಾತನಾಡಿ, ಇಂದು ಸಮಾಜ ಮೂಲ ತತ್ವವನ್ನು ಮರೆತು ಆಧುನಿಕ ಯುಗದಲ್ಲಿ ತಾನೇ ಸರ್ವಸ್ವ ಎಂದು ತಿಳಿದುಕೊಂಡಿದ್ದಾನೆ. ಲಿಂಗದ ಪರಿಕಲ್ಪನೆ ಅನಾದಿ ಕಾಲದಿಂದಲೂ ಇದೆ. ವಿಭೂತಿ ಲಿಂಗ ಜಗದ್ಗುರು ರೇಣುಕಾಚಾರ್ಯರು ನೀಡಿದ ಶಿವ ತತ್ವ ಸಿದ್ಧಾಂತಗಳು ಅಜರಾಮರವಾಗಿವೆ ಎಂದು ಹೇಳಿದರು.

ಶಿವರಾಜ ಅಲ್ಮಾಜೆ ಮಾತನಾಡಿದರು. ತಾಲೂಕು ಆಡಳಿತ ಕಚೇರಿಯ ಸಿಬ್ಬಂದಿ ರವಿ ಬಂಬುಳಗೆ, ಅಮಿತ, ಅನಿಲ, ಮುಖಂಡರಾದ ಶರಣಪ್ಪ ಪಂಚಾಕ್ಷರಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ, ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ, ದಯಾನಂದ ಸ್ವಾಮಿ, ಸಚ್ಚಿದಾನಂದ ಸ್ವಾಮಿ, ವಿಜಯಕುಮಾರ ಸ್ವಾಮಿ, ಮಹೇಶ ಸ್ವಾಮಿ, ಶ್ರೀಕಾಂತ ಅಲ್ಮಾಜೆ,  ವಿಶ್ವನಾಥ ಬಿರಾದಾರ, ಸಂತೋಷ ಚಾಂಡೆಶ್ವರೆ ಇತರರಿದ್ದರು.