ಬೀದರ್: ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಸರ್ಕಾರದಿಂದಲೇ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಹಕಾರಿ ಮುಖಂಡ ಜಗನ್ನಾಥ ಕರಂಜಿ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತ ಬಳಿಯ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೇಣುಕಾಚಾರ್ಯರು ಒಂದು ಜಾತಿ, ಧರ್ಮಕ್ಕೆ ಸೀಮಿತರಲ್ಲ. ಅವರು ಎಲ್ಲ ಧರ್ಮಿಯರಿಗೂ ಆದರ್ಶ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪ್ರಥಮವಾಗಿ ಜಗತ್ತಿಗೆ ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಶ್ರೀ ರೇಣುಕಾಚಾರ್ಯರು ಜಗತ್ತಿನ ಎಲ್ಲ ಧರ್ಮಗಳನ್ನು ಗೌರವಿಸಿದಲ್ಲದೆ, ಎಲ್ಲ ಧರ್ಮದ ಸಾರ ಒಂದೇ ಎಂಬ ಸಂದೇಶ ವಿಶ್ವಕ್ಕೆ ಪರಿಚಯಿಸಿದರು. ರೇಣುಕಾಚಾರ್ಯರ ಸಮುದಾಯ ಒಂದು ಭಾಗಕ್ಕೆ ಸೀಮಿತವಾಗಿರದೆ ದೇಶದ ಎಲ್ಲ ಮೂಲೆಗಳಿಗೆ ಆವರಿಸಿದೆ ಎಂದು ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಮಹೇಶ್ವರ ಸ್ವಾಮಿ, ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ, ನಿರ್ದೇಶಕರಾದ ಡಾ. ಶರಣಯ್ಯ ಹಿರೇಮಠ, ಮರುಳಾರಾಧ್ಯ ಸ್ವಾಮಿ, ಆನಂದ ಸ್ವಾಮಿ, ಸಂಗಮೇಶ ಸ್ವಾಮಿ, ಬಸವರಾಜ ಸ್ವಾಮಿ ಚಿಟ್ಟಾ, ಜ್ಯೋತಿ ಶ್ರೀಕಾಂತ ಸ್ವಾಮಿ, ಭಾಗ್ಯಶ್ರೀ, ರೇಖಾ, ಹಣಮಂತ ಪಟ್ನೆ, ನಾಗರಾಜ ಇತರರಿದ್ದರು.