ಜಿಲ್ಲೆ

ರೇಣುಕಸ್ವಾಮಿ ಹತ್ಯೆ,ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

ಚಿತ್ರದುರ್ಗ: ರೇಣುಕಸ್ವಾಮಿ ಹತ್ಯೆ ಪ್ರಕರಣ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ನಗರದ ರೇ ಣುಕಸ್ವಾಮಿ ಮನೆಗೆ ಶುಕ್ರವಾರ ಭೇಟಿ ನೀಡಿ,ನೊಂದ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಅವರು,ಪ್ರಕರಣ ನ್ಯಾಯಾಲಯದ ಮುಂದಿದ್ದು,ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯಾಗಲಿ.
ಆಕಸ್ಮಿಕವಾಗಿ ಇಂಥದೊಂದು ದುರ್ಘಟನೆ ನಡೆದಿದೆ. ಮೃತನ ಪತ್ನಿಗೆ ಸರ್ಕಾರ ಉದ್ಯೋಗ ಕೊಡಬೇಕು. ರೇಣುಕಾಸ್ವಾಮಿ ತಪ್ಪು ಮಾ ಡಿದ್ದರೆ ಆತನ ವಿರುದ್ಧ ದೂರು ನೀಡಬಹುದಾಗಿತ್ತು. ಮೃತನ ವಿರುದ್ಧ ಕೇಳಿ ಬಂದಿರುವ ಆರೋಪ ಸೈಬರ್‌ಕ್ರೈಂ ವ್ಯಾಪ್ತಿಗೆ ಬರುತ್ತದೆ. ಪೊ ಲೀಸ್‌ಅಧಿಕಾರಿಗಳಿಗೆ ಹೇಳಿದ್ದರೂ ಎಚ್ಚರಿಕೆ ಕೊಡುತ್ತಿದ್ದರು ಅಥವಾ ಕ್ರಮ ಜರುಗಿಸುತ್ತಿದ್ದರು. ದರ್ಶನ್ ಒಳ್ಳೆ ನಟ,ವ್ಯಕ್ತಿ. ಈಗ ಆತನ ವಿ ರುದ್ಧ ಆರೋಪವಿದೆ. ತನಿಖೆ ಬಳಿಕ ಸತ್ಯ ತಿಳಿಯಲಿದೆ. ಪ್ರಕರಣದ ಕುರಿತಂತೆ ಬಿಜೆಪಿ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂ ದರು.
ಚಿತ್ರರಂಗದಿಂದ ದರ್ಶನ್‌ಗೆ ನಿಷೇಧ ವಿಧಿಸುವ ಕುರಿತಂತೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಬೇಕು. ಮೃತನ ತಂದೆ ತಾಯಿ ಹಾಗೂ ಪತ್ನಿಗೆ ಧೈರ್ಯ ತಂದುಕೊಳ್ಳ ಬೇಕೆಂದ ಅವರು,ವೈಯುಕ್ತಿಕವಾಗಿ 50 ಸಾವಿರ ರೂ.ಆರ್ಥಿಕ ನೆರವು ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್,ಎಸ್.ಷಡಕ್ಷರಯ್ಯ ಮತ್ತಿತರರು ಇದ್ದರು.
(ಸಿಟಿಡಿ 5 ಬಿ.ಸಿ.ಪಾಟೀಲ್)
ಚಿತ್ರದುರ್ಗದಲ್ಲಿ ಮೃತ ರೇಣುಕಸ್ವಾಮಿ ಮನೆಗೆ ಶುಕ್ರವಾರ ಮಾಜಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ,ನೊಂದ ಕುಟುಂಬಕ್ಕೆ ಸಾಂ ತ್ವನ ಹೇಳಿದರು. ಪಾಲಕರಾದ ಕಾಶಿನಾಥಯ್ಯಶಿವನಗೌಡ್ರು,ರತ್ನಪ್ರಭಾ,ಪತ್ನಿ ಸಹನಾ ಇದ್ದರು.