ಬೀದರ್: ಇಲ್ಲಿನ ಬಸವ ಸೇವಾ ಪ್ರತಿಷ್ಠಾನ ಜಮೀನಿನಲ್ಲಿ ಕೆಲ ಶ್ರೀಮಂತರು ರೆಸಾರ್ಟ್ ನಿರ್ಮಾಣ ಮಾಡಲು ಆಸ್ಪದ ನೀಡದ ಕಾರಣಕ್ಕೆ ಅಕ್ಕ ಅನ್ನಪೂರ್ಣ ಅವರ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಷ್ಠಾನದ ಆಡಳಿತಾಧಿಕಾರಿ ಅಶೋಕ ಎಲಿ ಹೇಳಿದ್ದಾರೆ.
ರೆಸಾರ್ಟ್ ನಿರ್ಮಾಣ ಮಾಡಲು ಮುಂದಾಗಿದ್ದಾಗ ಅಕ್ಕ ಅನ್ನಪೂರ್ಣ ವಿರೋಧಿಸಿ, ಕಾವಲುಗಾರರಾಗಿ ನಿಂತರು. ಇದು ಕೆಲವರಿಗೆ ಮುಳುವಾಗಿದೆ. ಗಂಗಾಂಬಿಕೆ ಅಕ್ಕ ಈಗಲಾದರೂ ಇದನ್ನು ಅರ್ಥ ಮಾಡಿಕೊಂಡು ಪ್ರತಿಷ್ಠಾನ ವಿರೋಧಿಗಳ ಜತೆಗೆ ಕೈಜೋಡಿಸಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಗಂಗಾಂಬಿಕೆ ಅಕ್ಕ ಮತ್ತು ಇತರರು ಇತ್ತೀಚೆಗೆ ಅಕ್ಕ ಅನ್ನಪೂರ್ಣ ವಿರುದ್ಧ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿವೆ.ನ್ಯಾಯಾಲಯದ ಕದ ತಟ್ಟಿದವರೇ ಕಾನೂನುಬಾಹಿರ ಮಾತನಾಡುತ್ತಿರುವುದು ಸರಿಯಲ್ಲ. ಪ್ರತಿಷ್ಠಾನದಲ್ಲಿ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿದ್ದು, ಪ್ರತಿ ವರ್ಷದ ಆಡಿಟ್ (ವಾರ್ಷಿಕ ಲೆಕ್ಕಪರಿಶೋಧನಾ) ವರದಿಗಳಿವೆ. ಇಲ್ಲಿ ಯಾವ ರೀತಿಯ ಅವ್ಯವಹಾರ ನಡೆದಿಲ್ಲ. ಪ್ರತಿಷ್ಠಾನದ ಎಲ್ಲ ಆಸ್ತಿಗಳು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.
ಅನ್ನಪೂರ್ಣ ಅವರು ಬಸವ ತತ್ವ ಪ್ರಸಾರಕ್ಕಾಗಿ ತಮ್ಮನ್ನು ಸಮಪರ್ಿಸಿಕೊಂಡು ಬಸವ ಸೇವಾ ಪ್ರತಿಷ್ಠಾನ ಸ್ಥಾಪಿಸಿ ಎಲ್ಲರೂ ಮೆಚ್ಚುವಂಥ ಕೆಲಸ ಮಾಡುತ್ತಿದ್ದಾರೆ. ಆ ಕಾರ್ಯಗಳನ್ನು ವಿಸ್ತರಿಸಲು ಲಿಂಗಾಯತ ಮಹಾಮಠ ಸ್ಥಾಪಿಸಿದ್ದಾರೆ. ಬಸವ ತತ್ವ ಪ್ರಸಾರಕ್ಕೆ ಪೂರ್ಣಾವಧಿ ಮೀಸಲಿಡಲು ಸಕರ್ಾರಿ ನೌಕರಿಗೆ ರಾಜೀನಾಮೆ ಕೊಟ್ಟು ದುಡಿಯುತ್ತಿದ್ದಾರೆ. ಯಾವ ಕಾರಣಕ್ಕೂ ಪ್ರತಿಷ್ಠಾನ ಇಬ್ಭಾಗ ಅಸಾಧ್ಯದ ಮಾತು ಎಂದು ತಿಳಿಸಿದ್ದಾರೆ.
ಗಂಗಾಂಬಿಕೆ ಮಾಡಿದ್ದು ರಕ್ತ ಸಂಬಂಧಿಗಳ ಟ್ರಸ್ಟ್: ಡಾ.ಗಂಗಾಂಬಿಕೆ ಅಕ್ಕನವರು ತಮ್ಮ ತಾಯಿಯನ್ನು ಮಾತ್ರ ಸೇರಿಸಿ ಅಖಿಲ ಭಾರತ ಲಿಂಗಾಯತ ಹರಳಯ್ಯಾ ಪೀಠ ಚಾರಿಟೇಬಲ್ ಟ್ರಸ್ಟ್ ಮತ್ತು ಇಂಟರ್ನ್ಯಾಷನಲ್ ಧರ್ಮ ಕೇಂದ್ರ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದಾರೆ. ಎರಡು ಟ್ರಸ್ಟ್ಗಳನ್ನು ಯಾರೊಂದಿಗೂ ಚಚರ್ೆ ಮಾಡದೆ, ರಕ್ತ ಸಂಬಂಧಿಗಳೊಂದಿಗೆ ರಚಿಸಿಕೊಂಡು ಕಾರ್ಯಕ್ರಮಗಳು ಮಾಡುತ್ತಾ ಪ್ರತಿಷ್ಠಾನದ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ದೂರಿದ್ದಾರೆ.
ಅಕ್ಕ ಅನ್ನಪೂರ್ಣ ಲಿಂಗಾಯತ ಸಮಾಜದ ಆಸ್ತಿ. ಅವರನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯತೆ. ಈಗಲೂ ಕಾಲ ಮಿಂಚಿಲ್ಲ. ಅಕ್ಕನವರ ಆರೋಗ್ಯ ಸುಧಾರಣೆಗೆ ಸಹಕರಿಸಿ ಅವರ ಆಶಯದಂತೆ ಸಮಾಜೋಧಾಮರ್ಿಕ ಕಾರ್ಯಗಳಿಗೆ ಸಹಕರಿಸಬೇಕು. ಗಂಗಾಂಬಿಕೆ ಅಕ್ಕ ತಿಳಿದು ನಡೆದರೆ ಸಮಾಜದಲ್ಲಿ ನೆಮ್ಮದಿ ಮೂಡಲಿದೆ.
| ಅಶೋಕ ಎಲಿ, ಬಸವ ಸೇವಾ ಪ್ರತಿಷ್ಠಾನ ಆಡಳಿತಾಧಿಕಾರಿ