ಜಿಲ್ಲೆ

ರೆಮ್ ಡಿಸಿವಿರ್ ಚುಚ್ಚುಮದ್ದು ಲಸಿಕೆ ಕಾಳಸಂತೆಯಲ್ಲಿ ಮಾರಾಟ: ಐವರ ಬಂಧನ

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ರೆಮ್ ಡಿಸಿವಿರ್ ಚುಚ್ಚುಮದ್ದು ಲಸಿಕೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಅತಾವುಲ್ಲಾ ವೃತ್ತದ ಬಳಿಯ ಅಷ್ಟಫೈಲ್ ಬಂಗಲೆ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.

ಆನಂದ ಸೋಹನಲಾಲ ರುಣವಾಲ,

ಆದಿತ್ಯ ಅಣ್ಣಾರಾವ್ ಜೋಶಿ, ವಿಜಯ ಪ್ರಭಾಕರ್ ದೇಶಪಾಂಡೆ, ಶೃತಿ ಮಹೇಶ ಹಡಪದ, ಮಹ್ಮದಾಬ್ದುಲ್ ಆಲಂ ಮುಲ್ಲಾ ಬಂಧಿತ ಆರೋಪಿಗಳು.

ಬಂಧಿತರಿಂದ 3490 ಮೌಲ್ಯದ ಎರಡು ರೆಮಡಿಸಿವರ್ ಔಷಧೀಯ ಬಾಟಲ್ ಹಾಗೂ ನಾಲ್ಕು ಮೊಬೈಲ್ ಗಳನ್ನು ಜಫ್ತು ಮಾಡಿಕೊಳ್ಳಲಾಗಿದೆ.

ಸುಮಾರು 22, 980 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.