ಜಿಲ್ಲೆ

ರೆಡ್ಡಿ ಸಹೋದರರ ಮುನಿಸು ಶಮನ

ಬಳ್ಳಾರಿ: ನಗರದ ಆಟಾಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.‌ ಸೋಮಶೇಖರರೆಡ್ಡಿ ಹಾಗೂ ಶಾಸಕ ಜಿ. ಜನಾರ್ದನರೆಡ್ಡಿ ಸೇರಿ ಒಂದೇ ಹೂವಿನ ಹಾರವನ್ನು ಇಬ್ಬರು ಹಾಕಿಕೊಳ್ಳುವ ಮೂಲಕ ಹಲವು ದಿನಗಳ ಸಹೋದರರ ನಡುವಿನ ಮುನಿಸು ಶಮನಗೊಂಡಿತು.
ಬಳಿಕ ಶಾಸಕ ಜಿ. ಜನಾರ್ದನರೆಡ್ಡಿ‌ ಮಾತನಾಡಿ, ನಾವು ಇಬ್ಬರು ಒಂದೇ ತಾಯಿ ಮಕ್ಕಳು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ದೂರ ಉಳಿಯಬೇಕಾಯಿತು. ಆದರೆ, ಸದ್ಯ ಇಬ್ಬರ ನಡುವೆ ಯಾವುದೇ ಮುನಿಸಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ಸಹೋದರ ಸೋಮಶೇಖರರೆಡ್ಡಿ ಸ್ಪರ್ಧಿಸಿದರೆ, ಅವರ ಗೆಲುವಿಗೆ ಖಂಡಿತ ಶ್ರಮಿಸುವೆ. ಎಂದರು. ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರ ಅವಧಿ ವೇಳೆ ನಡೆದಿದ್ದ ಕಾಮಗಾರಿ ಗಳು ಬಿಟ್ಟು, ಸದ್ಯ ಬೇರೆ‌ ಕಾಮಗಾರಿಗಳು ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬಲಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಬಳಿಕ ನಗರದ ಹಲವಾರು ಬಿಜೆಪಿ ಸದಸ್ಯತ್ವ ಪಡೆದರು. ಕಾರ್ಯಕ್ರಮದ ನಂತರ ಸೋಮಶೇಖರರೆಡ್ಡಿ, ಜನಾರ್ದನರೆಡ್ಡಿ ಒಂದೇ ಕಾರಿನಲ್ಲಿ ಹೊರಟರು. ಸಹೋದರರ ಇಬ್ಬರು ಒಂದಾಗಿದ್ದು, ಕಂಡು ಬಿಜೆಪಿ ‌ಕಾರ್ಯಕರ್ತರು‌ ಸಂತಸ ವ್ಯಕ್ತಪಡಿಸಿದರು.