ಕಲಬುರಗಿ: ನಗರದ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮರ‍್ನಾಲ್ಕು ತಿಂಗಳಿಂದ ಕಳೆದುಕೊಂಡಿದ್ದ ೨೨೫ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದ್ದು, ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ಮೊಬೈಲ್ ಕಳೆದ ಬಗ್ಗೆ ಇ&ಲಾಸ್ಟ್ ಆ್ಯಪ್ ಮೂಲಕ ದೂರು ದಾಖಲಿಸಿದ್ದರು. ಇದನ್ನು ಅನುಸರಿಸಿ ಸಿಇಐಆರ್ ಪರ್ಟ್ಲ್ ಮೂಲಕ ತಾಂತ್ರಿಕ ತನಿಖೆ ನಡೆಸಿ, ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊಬೈಲ್ ಕಳೆದ ತಕ್ಷಣ ಇ&ಲಾಸ್ಟ್ ಆ್ಯಪ್ ಮೂಲಕ ದೂರು ಹಾಗೂ ಸಿಇಐಆರ್ ಪರ್ಟ್ಲ್ನಲ್ಲಿ ದಾಖಲಿಸಿದ್ದು, ಮೊಬೈಲ್ ಹುಡುಕಲು ಅನುಕೂಲವಾಗಿದೆ. ಸದ್ಯ ೪೬ ಲಕ್ಷ ರೂ. ಮೌಲ್ಯದ ೨೨೫ ಮೊಬೈಲ್ ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ೨೦೨೩ರ ಮರ‍್ಚ್ ೧ರಿಂದ ಇದುವರೆಗೆ ೧೪೨೩ ಮೊಬೈಲ್ ಹಿಂದಿರುಗಿಸಲಾಗಿದೆ. ಸಿಇಐಆರ್ ಪರ್ಟ್ಲ್ ಆರಂಭದ ನಂತರ ಇದುರೆಗೆ ೧೬೪೮ ಮೊಬೈಲ್ ವಾರಸುದಾರರಿಗೆ ವಾಪಸ್ ನೀಡಲಾಗಿದೆ ಎಂದು ತಿಳಿಸಿದರು.
ಮೊಬೈಲ್ ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು. ಸೆನ್ ಎಸಿಪಿ ಮಾಡೊಳಪ್ಪ, ಸಬ್ ರ‍್ಬನ್ ಎಸಿಪಿ ಡಿ.ಜಿ.ರಾಜಣ್ಣ, ಉತ್ತರ ಎಸಿಪಿ ಚಂದ್ರಶೇಖರ, ಪಿಐಗಳಾದ ಸಂತೋಷ ತಟ್ಟೆಪಲ್ಲಿ, ಸೋಮಲಿಂಗ ಕಿರದಳ್ಳಿ ಇತರರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಡಿಸಿಪಿಗಳಾದ ಕನಿಕಾ ಸಿಕ್ರಿವಾಲಾ, ಪ್ರವಿಣ ನಾಯಕ್ ಇದ್ದರು.