ಭಾಲ್ಕಿ: ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯ ಯುವ ಅಭ್ಯಥರ್ಿಗಳು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತೆ ಮತ್ತು ಸ್ವಂತ ಉದ್ಯಮ ಆರಂಭಿಸಲು ಅಣಿಗೊಳಿಸುವ ಉದ್ದೇಶದಿಂದ ಟಾಟಾ ಟೆಕ್ನಾಲಜಿಸ್ ಸಹಯೋಗದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸಕರ್ಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಉನ್ನತೀಕರಿಸಿ ತಾಂತ್ರಿಕ ಚಟುವಟಿಕಾ ಕೇಂದ್ರವನ್ನಾಗಿ ಪರಿವತರ್ಿಸಲಾಗುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಸಕರ್ಾರಿ ಐಟಿಐ ಕಾಲೇಜಿನ ಆವರಣದಲ್ಲಿ ಪ್ರಗತಿಯಲ್ಲಿರುವ ಟಾಟಾ ವಕರ್್ಶಾಪ್ಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಇದರಿಂದ ವಿದ್ಯಾಥರ್ಿಗಳಿಗೆ 11 ವಿವಿಧ ವಲಯಗಳಲ್ಲಿ ತರಬೇತಿ ಸಿಗಲಿದೆ. ಕೌಶಲಾಭಿವೃದ್ಧಿ ಅಪೇಕ್ಷೆಯಲ್ಲಿ ಇರುವ ವಿದ್ಯಾಥರ್ಿಗಳಿಗೆ ತಜ್ಞರಿಂದ ಶಿಕ್ಷಣ, ಆಧುನಿಕ ಉಪಕರಣಗಳ ಬಳಸಿ ಪ್ರಾಯೋಗಿಕ ತರಬೇತಿ, ಕೃಷಿ, ವಾಹನೋದ್ಯಮ, ಗೃಹ ಬಳಕೆಯ ವಿದ್ಯುನ್ಮಾನ ಉಪಕರಣಗಳು, ವಿದ್ಯುತ್ ಚಾಲಿತ ವಾಹನಗಳು, ಪ್ಯಾಕೇಜಿಂಗ್, ಔಷಧೀಯ ಉದ್ಯಮ, ಕರಕುಶಲ ವಸ್ತು, ಆಟಿಕೆಗಳ ಉದ್ಯಮ ಸೇರಿ ವಿವಿಧ ವಲಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.
ಎಸ್ಸೆಸ್ಸೆಲ್ಸಿ ಪಾಸಾದ, ಪಿಯುಸಿ, ಐಟಿಐ ಸೇರಿ ವಿವಿಧ ಕೋಸರ್್ನ ವಿದ್ಯಾಥರ್ಿಗಳು ಅಲ್ಪಾವಧಿ ಮತ್ತು ದೀಘರ್ಾವಧಿ ಶಿಕ್ಷಣ ತರಬೇತಿ ಪಡೆಯಬಹುದಾಗಿದೆ. ಈ ವಕರ್್ಶಾಪ್ನಲ್ಲಿ ಉಪಕರಣಗಳ ಜೋಡಣೆ ನಡೆಯುತ್ತಿದ್ದು, ಶೀಘ್ರವೇ ಆರಂಭಸಲಾಗುವುದು.ನಮ್ಮ ಭಾಗದ ರೈತರು, ಕೂಲಿ ಕಾಮರ್ಿಕರು ಹಾಗೂ ಬಡವರ ಮಕ್ಕಳು, ನಿರುದ್ಯೋಗ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಅನೀಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ, ಐಟಿಐ ಪ್ರಾಚಾರ್ಯ ಲಕ್ಷ್ಮೀಕಾಂತ ಇತರರಿದ್ದರು.