ಮತಿಘಟ್ಟದಿಂದ ಬೀರನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಗುದ್ದಲಿಪೂಜೆ ನೆರವೇರಿಸಿದರು. ಜೆ.ಸವಿತಾ, ಶ್ರೀಕಂಠ ಒಡೆಯರ್, ಕಷ್ಣಮೂರ್ತಿ, ಕರಿಬಡ್ಡೆ ಶ್ರೀನಿವಾಸ್, ಹನುಮಂತಪ್ಪ ಇತರರಿದ್ದರು.  
ಜಿಲ್ಲೆ

ರೂ.2 ಕೋಟಿಯಲ್ಲಿ ರಸ್ತೆ ಕಾಂಕ್ರಿಟೀಕರಣ

ಕಡೂರು: ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಮತಿಘಟ್ಟ ಮತ್ತು ಕೆರೆಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಅಭಿವದ್ಧಿ ಕಾಮಗಾರಿ ಮಾಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಮತಿಘಟ್ಟ ಗ್ರಾಮದಿಂದ ಬೀರನಹಳ್ಳಿಗೆ ಸಂಪರ್ಕ ಕಲ್ಪಿಸುವ 1 ಕೋಟಿ ರೂ. ವೆಚ್ಚದ ರಸ್ತೆಯ ಅಭಿವದ್ಧಿ ಕಾಮಗಾರಿಗೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸಿಮೆಂಟ್ ರಸ್ತೆ ಕಾಮಗಾರಿಗೆ 2 ಕೋಟಿ ಅನುದಾನ ಮಂಜೂರಾಗಿದ್ದು, ಪ್ರಾರಂಭಿಕವಾಗಿ 1 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಉಳಿದ ಕಾಮಗಾರಿಗೆ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ ಎಂದರು.

ಬಹುದಿನಗಳ ಬೇಡಿಕೆ ಆಗಿದ್ದ ರಸ್ತೆ ಮತಿಘಟ್ಟ ಗ್ರಾಮದಿಂದ ಮಲ್ಲಿದೇವಿಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ 12 ಕಿಮೀ ಸುತ್ತಿಬರುವುದು ತಪ್ಪಲಿದೆ. 1.3 ಕಿಮೀ ರಸ್ತೆಯ ಕಾಮಗಾರಿಗೆ ಒಂದು ಕೋಟಿ ಸಚಿವ ಮಂಕಾಳ ವೈದ್ಯರ ಅನುದಾನದಲ್ಲಿ ಮಂಜೂರಾತಿ ದೊರೆತಿದೆ ಎಂದರು.

ಮತಿಘಟ್ಟ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವದ್ಧಿ ನಡೆಯಲಿದೆ. ಸಿದ್ದಾಪುರ ರಸ್ತೆ ಅಭಿವದ್ಧಿಯೂ ಸದ್ಯದಲ್ಲೇ ಆರಂಭ ಆಗಲಿದೆ. ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಆದಾಯ ಹೊಂದಿ ಅಭಿವದ್ಧಿ ಕಾಣುತ್ತಿದೆ. ಕಡೂರು ಕೆಎಸ್‌ಆರ್‌ಟಿಸಿ ಘಟಕಕ್ಕೆ 12 ಹೊಸ ಬಸ್ ಬಂದಿವೆ. ಹೆಚ್ಚುವರಿಯಾಗಿ ಏಳು ಹೊಸ ಬಸ್‌ಗಳು ಸದ್ಯದಲ್ಲೇ ಬರಲಿವೆ ಎಂದರು.

ಮತಿಘಟ್ಟ ಗ್ರಾಪಂ ಅಧ್ಯಕ್ಷೆ ಜೆ.ಸವಿತಾ, ಸದಸ್ಯರಾದ ಶ್ರೀಕಂಠ ಒಡೆಯರ್, ಲಕ್ಕೇನಹಳ್ಳಿ ಕಷ್ಣ್ಣಮೂರ್ತಿ, ಪಿಡಿಒ ಹನುಮಂತಪ್ಪ, ಮುಖಂಡರಾದ ಕರಿಬಡ್ಡೆ ಶ್ರೀನಿವಾಸ್, ಶಶಿ, ಕಲ್ಲೇಶ್, ದಿನೇಶ್, ರಾಮಚಂದ್ರ ನಾಯ್ಕ, ಅಣ್ಣಪ್ಪ, ಆನಂದ್, ರಾಘು, ಅರುಣ್ ಕುಮಾರ್, ಲಿಂಗರಾಜು ಇತರರಿದ್ದರು.