ಜಿಲ್ಲೆ

ರೂ.2.20 ಲಕ್ಷದ ವಸ್ತು, ಹಣ ಜಪ್ತಿ

ಭಾಲ್ಕಿ: ನಗರ, ಗ್ರಾಮೀಣ ಠಾಣೆ ವ್ಯಾಪ್ತಿಯ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕಳ್ಳರನ್ನು ಬಂಧಿಸಿರುವ ಪೊಲೀಸರು, 2.20 ಲಕ್ಷ ರೂ. ಮೌಲ್ಯದ ವಸ್ತು ಹಾಗೂ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಹಿರೇಮಠ ಗಲ್ಲಿಯ ಬಸವರಾಜ ಮಾನೆ, ಪ್ರಕಾಶ ಮಾನೆ, ಅಂಕುಶ ತುಕಾರಾಮ ಬಂಧಿತರು. ಇವರು ದಿಲೀಪ ಕುಡತೆ ಹೊಲದಲ್ಲಿ ಕಳೆದ ಮೇ ತಿಂಗಳಲ್ಲಿ 1.07 ಲಕ್ಷದ ಮೋಟಾರ್ ಕೇಬಲ್ ವೈರ್, ಇತರ ವಸ್ತುಗಳನ್ನು ದೋಚಿದ್ದು ಸೇರಿ 8 ಕೇಸ್ಗಳಲ್ಲಿ ಭಾಗಿಯಾಗಿದ್ದರು. ಪೊಲೀಸರ ಕಾಯರ್ಾಚರಣೆಯಿಂದಾಗಿ 52 ಸಾವಿರ ರೂ. ಮೌಲ್ಯದ 6 ನೀರೆತ್ತುವ ಮೋಟಾರ್, 1.29 ಲಕ್ಷದ ಕೇಬಲ್ ವೈರ್, 2 ಗ್ಯಾಸ್ ಸಿಲಿಂಡರ್, ಟಿವಿಎಸ್ ಮೋಟಾರ್ ಸೈಕಲ್ ಇತರ ವಸ್ತು, ಹಣ ಜಪ್ತಿ ಮಾಡಿಕೊಂಡು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ನಗರ ಠಾಣೆ ಸಿಪಿಐ ಗುರಣ್ಣ ಎಸ್.ಹೆಬ್ಬಾಳ ನೇತೃತ್ವದಲ್ಲಿ ಪಿಎಸ್ಐ ವಿಶ್ವಾರಾಧ್ಯ, ಸಿಬ್ಬಂದಿ ಸುಭಾಷ, ಉಮಾಕಾಂತ ದಾನಾ, ಲಕ್ಷ್ಮೀಪುತ್ರ, ಹಾವಣ್ಣ ಪೂಜಾರಿ, ವಿಕ್ರಮ ಶಾಮರಾಯ ಒಳಗೊಂಡ ತಂಡ ಈ ಕಾಯರ್ಾಚರಣೆ ನಡೆಸಿದೆ.