ಕಲಬುರಗಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲ ಕೀಲಿ ಮುರಿದು ೧.೪೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಗರದ ಸೇಡಂ ರಸ್ತೆಯ ಕಾಳನೂರ ಕುಸನೂರ ಹೌಸಿಂಗ್ ಬರ್ಡ್ನ ಮನೆಯಲ್ಲಿ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಜ್ಯೂನಿಯರ್ ಅಸಿಸ್ಟಂಟ್, ತಮಿಳುನಾಡಿನ ಅಕ್ಷಯರಾಜ ಮನೆಯಲ್ಲಿ ಕಳ್ಳತನ ಸಂಭವಿಸಿದೆ. ಬಾಡಿಗೆ ಮನೆಯಲ್ಲಿರುವ ಅಕ್ಷಯರಾಜ ಮನೆಗೆ ಕೀಲಿ ಹಾಕಿಕೊಂಡು ಜು.೧೯ರಂದು ಕೊಯಮತ್ತೂರಿಗೆ ಹೋಗಿದ್ದು, ಜು.೨೪ರಂದು ವಾಪಸ್ ಬಂದಾಗ ಕೀಲಿ ಮುರಿದಿದ್ದು ತಿಳಿದಿದೆ. ಪರಿಶೀಲಿಸಿದಾಗ ಬಂಗಾರ ಲಾಕೆಟ್, ಬೆಳ್ಳಿ ಬ್ರಾಸ್ಲೇಟ್, ಬೆಳ್ಳಿ ಶಂಕ, ಚಕ್ರ ಮುದ್ರೆ, ಕೈ ಗಡಿಯಾರ ಸೇರಿ ಒಟ್ಟು ೧.೪೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಗುಲ್ರ‍್ಗ ವಿವಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.