ಜಿಲ್ಲೆ

ರಿಷಿ ಪ್ರತಿಷ್ಠಾನದಿಂದ ಬಹುಮಾನ ವಿತರಣೆ

ಮಂಗಳೂರು: ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಶಾಲೆಗೊಂದು ವನ ವಿದ್ಯಾರ್ಥಿಗೊಂದು ಗಿಡ ಯೋಜನೆಯ ಅಂಗವಾಗಿ ಉತ್ತಮವಾಗಿ ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಮೈರೋಳ್ತಡ್ಕ ಶಾಲೆಯಲ್ಲಿ ಇತ್ತೀಚೆಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ ಮಾತನಾಡಿ, ರಿಷಿ ಪ್ರತಿಷ್ಠಾನವು ಪರಿಸರದ ಉಳಿವಿನ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಂಡಿದೆ. ಪರಿಸರದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ ಮರಗಿಡಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ. ಅತಿಥಿಯಾಗಿದ್ದರು. ಪ್ರತಿಷ್ಠಾನದ ಕಾರ್ಯಕ್ರಮ ಸಂಯೋಜಕಿ ದೇವಿಕಾ ಸುಳ್ಯ, ಶಾಲಾಭಿವೃದ್ಧಿ ಸಮಿತಿಯ ಹರಿಣಾಕ್ಷಿ ಬಿ.ಎನ್.,ರಾಮಣ್ಣ ಗೌಡ, ಮೋಹಿನಿ ಎಸ್.ಉಪಸ್ಥಿತರಿದ್ದರು.
ಗಿಡ ನೆಟ್ಟು ಉತ್ತಮ ರೀತಿಯಲ್ಲಿ ಪೋಷಿಸಿದ ವಿದ್ಯಾರ್ಥಿಗಳಾದ ಮೋಕ್ಷಾ (ಪ್ರ),ತನ್ವಿ (ದ್ವಿ),ನಿತ್ಯಶ್ರೀ(ತೃ) ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು.
ಶಿಕ್ಷಕಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.