ವ್ಯಕ್ತಿಯೋರ್ವ ಸೊಂಟಕ್ಕೆ ರಿವಾಲ್ವರ್ ಕಟ್ಟಿಕೊಂಡು ಬೆಳಗಾವಿಯ ಖಡೇ ಬಜಾರ್‌ನಲ್ಲಿ ತಿರುಗಾಡುತ್ತಿರುವುದು. 
ಜಿಲ್ಲೆ

ರಿವಾಲ್ವರ್‌ನೊಂದಿಗೆ ಸಂಚಾರ, ಓರ್ವನ ಬಂಧನ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸೊಂಟಕ್ಕೆ ರಿವಾಲ್ವರ್ ಕಟ್ಟಿಕೊಂಡು ನಗರದಲ್ಲಿ ತಿರುಗಾಡುತ್ತಿದ್ದ ಶಿವಸೇನೆ ಮುಖಂಡನನ್ನು ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದೇಸೂರ ಗ್ರಾಮದ ಹನುಮಂತ ಮಜುಕರ ಬಂಧಿತ. ಇಲ್ಲಿನ ಖಡೇ ಬಜಾರ್ ರಸ್ತೆಯಲ್ಲಿ ಸೊಂಟಕ್ಕೆ ರಿವಾಲ್ವರ್ ಕಟ್ಟಿಕೊಂಡು ತಿರುಗಾಡುತ್ತಿದ್ದ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆತನ ೆಟೋ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಾಗೂ ಶಸಾಸ ಕಾಯ್ದೆ ನಿಯಮ ಉಲ್ಲಂಸಿದ್ದರಿಂದ ಖಡೇ ಬಜಾರ್ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡು, ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಆಯುಧ ಪರವಾನಗಿಯನ್ನೂ ಜಪ್ತಿ ಮಾಡಲಾಗಿದೆ. ಆಯುಧ ಹೊಂದಿದವರು ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕು. ಹೊರಗಡೆಯಿಂದ ನಗರಕ್ಕೆ ಬರುವವರೂ ಯಾವುದೇ ರೀತಿಯ ಆಯುಧದೊಂದಿಗೆ ತಿರುಗಾಡಬಾರದು ಎಂದು ಡಿಸಿಪಿ ಡಾ.ವಿಕ್ರಂ ಆಮಟೆ ಕೋರಿದ್ದಾರೆ.