ಜಿಲ್ಲೆ

ರಿಯಾಯಿತಿ ದರದಲ್ಲಿ ಸಸಿ ಲಭ್ಯ

ಸೋಮವಾರಪೇಟೆ: ತಾಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಹುದುಗೂರು ಗ್ರಾಮದ ವಲಯ ಅರಣ್ಯ ಕ್ಷೇತ್ರದಲ್ಲಿ ವಿವಿಧ ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ಪರಿಷ್ಕೃತ ದರದಲ್ಲಿ ವಿತರಿಸಲಾಗುತ್ತಿದೆ. ನೇರಳೆ, ಮಹಾಗನಿ, ಬಿದಿರು, ನೆಲ್ಲಿ, ಸೀಬೆ, ಬಿದಿರು, ಶಿವನಿ, ಕಹಿಬೇವು, ಬಿಲ್ವಪತ್ರೆ, ರಕ್ತಚಂದನ, ಹೊನ್ನೆ, ಚಕ್ಕೆ, ಮುಳ್ಳು ಸಂಪಿಗೆ, ತೇಗ, ಹೆಬ್ಬೇವು, ಹಲಸು, ಹೆಬ್ಬಲಸು ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ರೈತರು ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಪ್ರತಿ, ತಮ್ಮ ಜಮೀನಿನ ಅರ್‌ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು. ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರು ನೆಟ್ಟ 100 ಸಸಿಗಳಿಗೆ 8 ಸಾವಿರದಿಂದ 14 ಸಾವಿರ ರೂ. ವರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ವಿವರಗಳಿಗೆ ಉಪ ವಲಯ ಅರಣ್ಯಾಧಿಕಾರಿ 9483646101 ಅಥವಾ 9008994572 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.