ಜಿಲ್ಲೆ

ರಾಹುಲ್ ವಾಸ್ತವ್ಯ ಹೂಡುವ ಸ್ಥಳ ಪರಿಶೀಲನೆ

ಪಾಂಡವಪುರ ತಾಲೂಕಿಗೆ ಅ.3ರಂದು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡುವ ಸ್ಥಳಗಳನ್ನು ವಾಸ್ತವ್ಯ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರಿಶೀಲನೆ ಮಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕಿಟ್ಟಿ, ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಇದ್ದರು.

ಪಾಂಡವಪುರ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಅ.3 ರಂದು ತಾಲೂಕು ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ವಾಸ್ತವ್ಯ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಯಾತ್ರೆ ತೆರಳುವ ರಸ್ತೆ ಮತ್ತು ವಾಸ್ತವ್ಯದ ಸ್ಥಳಗಳನ್ನು ಬುಧವಾರ ಪರಿಶೀಲನೆ ನಡೆಸಿದರು.


ಶ್ರೀರಂಗಪಟ್ಟಣದಿಂದ ಯಾತ್ರೆ ಅ.3 ರಂದು ತಾಲೂಕು ಪ್ರವೇಶಿಸಲಿದ್ದು, ಅಂದು ಪಟ್ಟಣದ ಐದು ದೀಪ ವೃತ್ತದ ಬಳಿ ಸಭೆ ನಡೆಸಿದ ಬಳಿಕ ಅ.4 ಮತ್ತು 5 ರಂದು ದಸರಾ ಪ್ರಯುಕ್ತ ವಿಶ್ರಾಂತಿ ಇರುತ್ತದೆ. ರಾಹುಲ್ ಗಾಂಧಿ ಅವರು ತಾಲೂಕಿನ ಟಿ.ಎಸ್.ಛತ್ರ ಸಮೀಪ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ವಾಸ್ತವ್ಯ ಹೂಡುವ ಸ್ಥಳ ಹಾಗೂ ರಾಹುಲ್ ಜತೆಯಲ್ಲಿ ಆಗಮಿಸುವ ರಾಷ್ಟ್ರ ಮತ್ತು ರಾಜ್ಯ ನಾಯಕರ ವಾಸ್ತವ್ಯಕ್ಕೆ ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣ ಹಾಗೂ ಖಾಸಗಿ ಹೊಟೇಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನೀಡಿದ ದಿನೇಶ್ ಗುಂಡೂರಾವ್ ಅವರು ಅಗತ್ಯವಾಗಿ ಕೈಗೊಳ್ಳಬೇಕಾದ ಇತರ ವ್ಯವಸ್ಥೆಗಳ ಸ್ಥಳೀಯ ಮುಖಂಡರೊಂದಿಗೆ ಚೆರ್ಚೆ ನಡೆಸಿದರು.


ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನಗಾನಹಳ್ಳಿ ಕಿಟ್ಟಿ, ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್, ಮುಖಂಡರಾದ ಚಿಕ್ಕಾಡೆ ಶ್ರೀಕಾಂತ್, ಸಿ.ಎಂ.ಮಹೇಶ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಹುಚ್ಚೇಗೌಡ, ಅಂತನಹಳ್ಳಿ ಬಸವರಾಜು ಇತರರು ಇದ್ದರು.