ಜಿಲ್ಲೆ

ರಾಹುಲ್​ ಗಾಂಧಿಗೆ ತಪ್ಪು ಮಾಹಿತಿ

ಕೋಲಾರದಲ್ಲಿ ಕಾಂಗ್ರೆಸ್​ ಅಹಿಂದ ಮುಖಂಡರು ನಗರ ಬ್ಲಾಕ್​ ಅಧ್ಯಕ್ಷ ಪ್ರಸಾದ್​ಬಾಬು ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಿದರು. ಮುಖಂಡ ಅಂಚೆ ಅಶ್ವಥ್​, ನಗರಸಭೆ ಮಾಜಿ ಸದಸ್ಯ ರೌತ್​ ಶಂಕರಪ್ಪ, ಮಂಜುನಾಥ್​ ಇದ್ದರು.

ಕೋಲಾರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದಲೇ ಸ್ವರ್ಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಿ ಅಹಿಂದ ಸಂಘಟನೆಗಳ ಮುಖಂಡರು ತೀಮಾರ್ನಿಸಿದರು.
ನಗರದ ಹಾಲಿಸ್ಟಾರ್​ ಭವನದಲ್ಲಿ ಭಾನುವಾರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ಬಾಬು ಅಧ್ಯಕ್ಷತೆಯಲ್ಲಿ ನಡೆದ ಮುಖಂಡರ ತುರ್ತುಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದು, ಪಕ್ಷದ ನೇತಾರ ರಾಹುಲ್​ಗಾಂಧಿಗೆ ಖಾಸಗಿ ಏಜೆನ್ಸಿಯವರು ನೀಡಿರುವ ವರದಿ ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಕೋಲಾರದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಬೇಕಿದೆ ಎಂದು ತಿಳಿಸಿದರು
ನಗರ ಹೊರವಲಯದ ನಾಗರ್ಜುನ ಹೋಟೆಲ್​ನಲ್ಲಿ ಆಂಧ್ರ ಮೂಲದ ಖಾಸಗಿ ಏಜೆನ್ಸಿ ಸಮೀಕ್ಷೆದಾರ ಸುನೀಲ್​ ಉಳಿದುಕೊಂಡು ಸಮೀಕ್ಷೆ ನಡೆಸುತ್ತಿದ್ದದ್ದು ನಿಜ. ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ಅನುಕೂಲಕರವಾದ ವರದಿಗಳನ್ನು ನೀಡಿದ್ದರು. ನಂತರದಲ್ಲಿ ಅವರು ತಾವು ಉಳಿದುಕೊಂಡಿದ್ದ
ಹೋಟೆಲ್​ ಮಾಲೀಕ ಜೆಡಿಎಸ್​ ಪಕ್ಷದವರಾಗಿದ್ದುದರಿಂದ ಆಮಿಷಕ್ಕೆ ಒಳಪಡೆಸಿ ಕ್ಷೇತ್ರ ಸುರಕ್ಷಿತವಲ್ಲ ಎಂಬ ತಪ್ಪು ಮಾಹಿತಿ ರಾಹುಲ್​ ಗಾಂಧಿಗೆ ಕೊಡಿಸಲಾಗಿದೆ ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯಪಟ್ಟರು.
ವಕೀಲ ಶ್ರೀನಿವಾಸ್​ ಮಾತನಾಡಿ, ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಮತದಾರರು ಹಲವಾರು ಕನಸುಗಳನ್ನು ನಿರೀಕ್ಷಿಸಿದ್ದರು. ಅದರೆ ಅವರು ಸ್ಪರ್ಧಿಸುವುದಿಲ್ಲವೆಂಬ ವಿಚಾರ ತಿಳಿದು ಅಹಿಂದ ವರ್ಗಗಳಿಗೆ ಭಾರಿ ನೋವುಂಟಾಗಿದೆ. ಸಮಾನ ಮನಸ್ಕ ನಾಯಕರೆಲ್ಲರೂ ಸಂಘಟಿತರಾಗಿ ಸಿದ್ದರಾಮಯ್ಯರನ್ನು ಮತ್ತೆ ಕೋಲಾರದಿಂದ ಸ್ಪರ್ಧಿಸುವಂತೆ ಮಾಡಬೇಕಾಗಿದೆ ಎಂದರು. ನಗರಸಭೆ ಮಾಜಿ ಸದಸ್ಯ ರೌತ್​ ಶಂಕರಪ್ಪ, ಮುಖಂಡ ಮುಳಬಾಗಿಲು ವೆಂಕಟೇಶ್​ ಗೌಡ, ಗಂಗಮ್ಮ ಪಾಳ್ಯ ರಾಮಯ್ಯ ಮಾತನಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ವಿ.ಪ್ರಕಾಶ್​, ಮಾಜಿ ಸದಸ್ಯ ಸಿ.ಸೋಮಶೇಖರ್​, ಮುಖಂಡರಾದ ಲಾಲ್​ ಬಹುದ್ದೂರ್​ ಶಾಸ್ತ್ರಿ, ಕೃಷ್ಣಮೂರ್ತಿ, ಪೊಲೀಸ್​ ಅಶ್ವಥ್​, ಸುಧೀರ್​, ಪಾಲ್ಗುಣ, ವೆಂಕಟಪತಪ್ಪ, ಕಠಾರಿ ಪಾಳ್ಯ ಗಂಗಧಾರ್​, ವೈ.ಶಿವಕುಮಾರ್​, ಕಿಲಾರಿ ಪೇಟೆ ಮಣಿ, ಗಾಂಧಿನಗರ ವೆಂಕಟೇಶ್​, ಹಾರೋಹಳ್ಳಿ ಮಂಜುನಾಥ್​, ಗೌರಿಪೇಟೆ ರವೀಂದ್ರನಾಥ್​, ಪ್ರಭಾಕರ್​, ಬಸವನತ್ತ ಶ್ರೀನಿವಾಸ್​, ಕನಕನ ಪಾಳ್ಯದ ಶ್ರೀಕಾಂತ್​, ಗಾಜಲದಿನ್ನೆ ನಾರಾಯಣಸ್ವಾಮಿ, ಅನಂತಪ್ಪ. ಮೋಹನ್​ ಪ್ರಸಾದ್​, ವೆಂಕಟರಾಮ್​ ಮುಂತಾದವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಾನು ಆಕಾಂಕ್ಷಿ


ಕೋಲಾರ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ, ವರುಣಾ ಅಥವಾ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಹೈಕಮಾಂಡ್​ ನಿರ್ಧರಿಸಲಿದೆ. ಕೋಲಾರದಿಂದ ಸ್ಪರ್ಧಿಸಿದರೆ ನಾವು 100ಕ್ಕೆ 100ರಷ್ಟು ಗೆಲ್ಲಿಸಿಕೊಡುತ್ತೇವೆ. ಅಕಸ್ಮಾತ್​ ಸ್ಪರ್ಧೆ ಇಲ್ಲವೆಂದಾದರೆ ನಾನು ಕೋಲಾರಕ್ಕೆ ಪ್ರಬಲ ಆಕಾಂಯಾಗಿದ್ದೇನೆ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್​ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದು ಬೇಡವೆಂದು ಹೈಕಮಾಂಡ್​ ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಬಹಳಷ್ಟು ಆಕಾಂಗಳಿದ್ದಾರೆ. ಆದರೆ ಅಂತಹ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಹಾಗೂ ತಾಲೂಕಿನ ಎಲ್ಲ ಕಾಂಗ್ರೆಸ್​ ಮುಖಂಡರು ಒಂದು ತೀರ್ಮಾನಕ್ಕೆ ಬರುತ್ತೇವೆ. ಕೋಲಾರದಲ್ಲಿ ಕಾಂಗ್ರೆಸ್​ ಸಂಟನೆ ಬಲಿಷ್ಠವಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮಾಸ್​ ಲೀಡರ್​ ಆದ ಕಾರಣ ಅವರ ಸ್ಪರ್ಧೆಯ ವಿಚಾರ ಚರ್ಚೆಯಲ್ಲಿದೆ. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬೆಳೆದಿದ್ದಾರೆ. ಆದ್ದರಿಂದ ಶನಿವಾರದಿಂದ ಸಿದ್ದರಾಮಯ್ಯ ಅವರ ೇತ್ರದ ಆಯ್ಕೆ ಮತ್ತು ಕೋಲಾರದ ಬಗ್ಗೆ ಚರ್ಚೆಯಾಗುತ್ತಿದೆ. ಈಗಾಗಲೇ ಕೋಲಾರಕ್ಕೆ 3 ಬಾರಿ ಬಂದು ಹೋಗಿದ್ದಾರೆ. ೇತ್ರದ ಆಯ್ಕೆ ಬಗ್ಗೆ ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕವಿಲ್ಲ, ಬಿಜೆಪಿ ಮತ್ತು ಜೆಡಿಎಸ್​ನವರ ಅಬ್ಬರದ ಪ್ರಚಾರದಲ್ಲಿದ್ದಾರೆ. ಕೋಲಾರದಲ್ಲಿ ಇನ್ನೂ ಚುನಾವಣೆ ಕಾವು ಹೆಚ್ಚಾಗಿಲ್ಲ, ಪ್ರತಿಪಕ್ಷದವರು ಚುನಾವಣೆ ಬಗ್ಗೆ ಶೇ.10ರಷ್ಟು ಮಾತನಾಡುತ್ತಿದ್ದಾರೆ, ಸಿದ್ದರಾಮಯ್ಯನವರು ಕೋಲಾರಕ್ಕೆ ಬರುವುದಾಗಿ ೂಷಣೆ ಮಾಡಿದ ನಂತರ ಐದಾರು ತಿಂಗಳಿನಿಂದ ಕೋಲಾರದಲ್ಲಿ ಕಾಂಗ್ರೆಸ್​ ಗಟ್ಟಿಯಾಗಿ ಬೇರೂರಿದೆ ಎಂದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಇಬ್ಬರು ರಾಜ್ಯಾ ದ್ಯಂತ ಸಂಚರಿಸಿ ಎಲ್ಲ ೇತ್ರದಲ್ಲಿಯೂ ನಾವೇ ಸ್ಪರ್ಧಿಗಳೆಂದು ಹೇಳುತ್ತಿದ್ದಾರೆ. ಅವರು ಈ ರಾಜ್ಯದ ಪರಮೋಚ್ಚ ನಾಯಕರು ಎಂದು ಹೇಳಿದರು.
ಎರಡು ಜಿಲ್ಲೆಗಳಲ್ಲಿ ಸಂಪರ್ಕ: ಕೆಪಿಸಿಸಿ ಅಧ್ಯಕ್ಷರು ನನಗೇ ಟಿಕೆಟ್​ ಖಾತ್ರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. 224 ೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲಬೇಕೆಂದು ಮತ ಕೇಳುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮುಖ್ಯ. ನಾನು ಸತತವಾಗಿ ಡಿ.ಕೆ.ಶಿವಕುಮಾರ್​ ಸಂಪರ್ಕದಲ್ಲಿದ್ದೇನೆ. ಕೋಲಾರ&ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳ ಸಂಪರ್ಕದಲ್ಲಿದ್ದೇನೆ. ನಾನು ಆಕಾಂಯಾಗಿ ರುವುದರಿಂದ ನನಗೆ ಇನ್ನೂ ಯಾವ ೇತ್ರವೆಂದು ತಿಳಿಸಿಲ್ಲ. ನಾನು ಕೋಲಾರದಲ್ಲಿ ಇರುವಂಥ ವ್ಯಕ್ತಿ. ನನಗೆ ನವದೆಹಲಿ ಮತ್ತು ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತದೆ ಎಂದು ಗೊತ್ತಿಲ್ಲ ಎಂದು ಬ್ಯಾಲಹಳ್ಳಿ ಗೋವಿಂದಗೌಡರು ಸ್ಪಷ್ಟ ಪಡಿಸಿದರು.