ಚಿಕ್ಕಮಗಳೂರು ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಷ್ಟç ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಎಂ.ಆರ್.ದೇವರಾಜಶೆಟ್ಟಿ, ಸಂತೋಷ್ ಕೋಟ್ಯಾನ್, ಹಿರೇಮಗಳೂರು ಪುಟ್ಟಸ್ವಾಮಿ, ಬಿ.ರಾಜಪ್ಪ ಮತ್ತಿತರರಿದ್ದರು. 
ಜಿಲ್ಲೆ

ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಇಂಡಿಯಾ ಒಕ್ಕೂಟ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಶನಿವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾAಧಿ ವಿರುದ್ಧ ಆಟಲ್‌ಬಿಹಾರಿ ವಾಜಪೇಯಿ ವಿದೇಶದಲ್ಲಿ ಎಂದಿಗೂ ಟೀಕಿಸಿರಲಿಲ್ಲ. ಆದರೆ ಇಂದಿರಾಗಾAಧಿ ಅವರ ಮೊಮ್ಮಗ ಇಂದು ವಿದೇಶಗಳಲ್ಲಿ ಭಾರತದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ೧೪೫ ಕೋಟಿ ಜನತೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರಧಾನಿಗಳು ರಾಷ್ಟçವನ್ನು ವಿಶ್ವಗುರುವನ್ನಾಗಿ ಮಾಡಲು ಹೊರಟರೆ, ಇನ್ನೊಂದೆಡೆ ರಾಹುಲ್‌ಗಾಂಧಿ ಬೇಜವಾಬ್ದಾರಿತನದಿಂದ ದೇಶವನ್ನು ಒಡೆಯುವ ಕಾಯಕದಲ್ಲಿ ತೊಡಗಿರುವುದು ದೇಶಕ್ಕೆ ದೊಡ್ಡ ಕಂಟಕ ಎಂದು ದೂರಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲೆಲ್ಲಿ ಬಿಜೆಪಿಯನ್ನು ಅವಮಾನಿಸಿತ್ತೋ ಅಲ್ಲೆಲ್ಲಾ ಈಗ ಬಿಜೆಪಿ ಜಯಭೇರಿ ಭಾರಿಸಿ ಬಹುಮತದಿಂದ ಅಧಿಕಾರ ಹಿಡಿದಿದೆ. ರಾಹುಲ್ ಗಾಂಧಿ ಕನಿಷ್ಟ ದೇಶದ ಗಾಳಿ, ನೀರು, ಮಣ್ಣಿನ ಋಣಕ್ಕಾದರೂ ಸನ್ನಡತೆ ಹೊಂದದೇ, ದೇಶ ಒಡೆಯುವ ಹೇಳಿಕೆ ನೀಡಿದ್ದಾರೆ. ಕೂಡಲೇ ರಾಹುಲ್ ಗಾಂಧಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಇಟಲಿಯ ತವರು ದೇಶಕ್ಕೆ ತೊಲಗಬೇಕು ಎಂದು ಒತ್ತಾಯಿಸಿದರು.

ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತ ದೇಶ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ನಮ್ಮ ಹೋರಾಟ ಎಂದು ಹೇಳಿಕೆ ನೀಡಿರುವ ರಾಹುಲ್‌ಗಾಂಧಿ ನೈತಿಕವಾಗಿ ನಕ್ಸಲರು, ಉಗ್ರಗ್ರಾಮಿಗಳ ನೆರಳಿನಲ್ಲಿ ನಿಂತಿರುವುದು ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಆತಂಕವನ್ನುAಟು ಮಾಡಿದೆ ಎಂದರು.

ಸ್ವಾತAತ್ರÈ ಪೂರ್ವದಲ್ಲಿ ಕಾಂಗ್ರೆಸ್ ದೇಶವನ್ನು ತುಂಡರಿಸಿದAತೆ, ಇದೀಗ ಮೊಮ್ಮಗ ದೇಶವಿರೋಧಿ ಹೇಳಿಕೆ ನೀಡಿ ವಿಭಜಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಚಳವಳಿ, ಟೀಕೆ, ಟಿಪ್ಪಣಿಗಳು ನಡೆಸಿದರೆ ಸೂಕ್ತ ಉತ್ತರ ಸಿಗಲಿದೆ. ಆದರೆ ರಾಷ್ಟçಕ್ಕೆ ಅವಮಾನಿಸಿದರೆ ಎಂದಿಗೂ ಸಹಿಸಿಕೊಳ್ಳುವ ಮನಸ್ಥಿತಿ ಬಿಜೆಪಿ ಕಾರ್ಯಕರ್ತರಲಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಮಾತನಾಡಿ, ಕಾಂಗ್ರೆಸ್‌ಗೆ ಮೋದಿ ಆಳ್ವಿಕೆ ಟೀಕಿಸುವುದು, ಹೊರದೇಶದಲ್ಲಿ ರಾಷ್ಟçಕ್ಕೆ ಅವಹೇಳನಕಾರಿ ಹೇಳಿಕೆ ನೀಡುವುದೇ ದೊಡ್ಡ ಸಾಧನೆ ಎಂದು ಭಾವಿಸಿದಂತಿದೆ. ರಾಹುಲ್‌ಗಾಂಧಿಗೆ ವಿಪಕ್ಷ ಹಾಗೂ ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ವಾತಂತ್ರÈ ನಂತರದ ದಿನದಲ್ಲಿ ಕಾಂಗ್ರೆಸ್ ಹಿರಿಯರ ಧೋರಣೆ ಚಾಳಿಯನ್ನೇ ಇದೀಗ ಮೊಮ್ಮಗ ರಾಹುಲ್‌ನಲ್ಲಿ ಮುಂದುವರೆಸಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಪ್ರಭಾವ ಎಲ್ಲೆಡೆ ಮುಟ್ಟಿರುವ ಕಾರಣ ದೇಶದ ಜನತೆ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್‌ಗೆ ನೈತಿಕ ಶಕ್ತಿ ಹಾಗೂ ಸಂಘಟನಾ ಬಲವಿಲ್ಲದ ಕಾರಣ ಸೋಲುಂಡು ಹೀನಾಯ ಸ್ಥಿತಿ ಎದುರಿಸುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಶಶಿ ಆಲ್ದೂರು, ನೆಟ್ಟಕೆರೆಹಳ್ಳಿ ಜಯಣ್ಣ, ಮಂಜುನಾಥ್ ಬ್ಯಾಟರಿ, ಅಂಕಿತಾ, ರಾಜೇಶ್, ಜೀವನ್‌ಕೋಟೆ, ಬಸವರಾಜ್, ಓಂಕಾರೇಗೌಡ, ನಾಗರಾಜ್, ಮಂಜುನಾಥ್, ಪ್ರದೀಪ್, ಕಬೀರ್ ಮತ್ತಿತರರಿದ್ದರು.