ನಿಪ್ಪಾಣಿ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಆಯೋಜಿಸಿದ್ದ ಭೀಮಪರ್ವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಮದಾಸ್ ಅಠವಳೆ ಮಾತನಾಡಿದರು. ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಬಸವಪ್ರಸಾದ ಜೊಲ್ಲೆ, ಜಯವಂತ ಭಾಟಲೆ, ಜೋತಿಪ್ರಸಾದ ಜೊಲ್ಲೆ ಇದ್ದರು. 
ಜಿಲ್ಲೆ

ರಾಹುಲ್ ಇದ್ದರೆ ನಮಗೇ ಲಾಭ

ನಿಪ್ಪಾಣಿ: ರಾಹುಲ್ ಗಾಂಧಿ ಅವರಿಗೆ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಕಂಡು ಎಲ್ಲಿಗೆ ಹೋಗಬೇಕೆಂಬುದು ತಿಳಿಯುತ್ತಿಲ್ಲ. ಅವರು ಎಲ್ಲಿಗೂ ಹೋಗಬಾರದು. ಅವರು ದೇಶದಲ್ಲಿ ಇರಬೇಕು. ರಾಹುಲ್ ದೇಶದಲ್ಲಿ ಇದ್ದಷ್ಟು ನಮಗೆ ಲಾಭ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ ರಾಮದಾಸ ಅಠವಳೆ ವ್ಯಂಗವಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ ಶೈಕ್ಷಣಿಕ ಸಮೂಹದ ಮೈದಾನದಲ್ಲಿ ಭಾನುವಾರ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಿದ್ದ ಭೀಮಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1.34 ಲಕ್ಷ ಕೋಟಿ ರೂ. ನನ್ನ ಮಂತ್ರಾಲಯದ ಬಜೆಟ್ ಆಗಿದ್ದು, ಸಮಾಜದ ಕಟ್ಟಕಟೆಯ ಜನಸಾಮಾನ್ಯರಿಗೂ ಅದರ ಲಾಭವಾಗುತ್ತಿದೆ. ಎಲ್ಲ ನದಿ ಜೋಡಣೆ ಯೋಜನೆಯನ್ನು ಪ್ರಥಮವಾಗಿ ಡಾ. ಅಂಬೇಡ್ಕರ್ ಅವರು ಮೊದಲು ಆರಂಭಿಸಿದ್ದರು. ಅದನ್ನೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ ಎಂದರು.

ದೇಶದ ಅಭಿವದ್ಧಿಗಾಗಿ ಶ್ರಮಿಸುತ್ತಿರುವ ಮೋದಿಯವರು ಅತ್ಯಂತ ಸಮರ್ಥ ಪ್ರಧಾನಿಯಾಗಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆಯುತ್ತಿದ್ದಾರೆ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನ ತುಂಬ ಬಲಿಷ್ಠವಾಗಿದೆ. ಅದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಜೊಲ್ಲೆ ಉದ್ಯೋಗ ಸಮೂಹದಿಂದ ಇಲ್ಲಿಯವರೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ಅನಾವರಣ ಮಾಡಲು ವೇದಿಕೆ ಕಲ್ಪಿಸುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲಾಗುವುದು. ಈ ಭೀಮಪರ್ವ ಕಾರ್ಯಕ್ರಮದ ಮೂಲಕ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಒಂದು ಹೊಸ ವೇದಿಕೆ ಪರಿಚಯಿಸಲಾಗುತ್ತಿದೆ. ನಮ್ಮ ಭಾಗದ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ಡಾ. ಅಂಬೇಡ್ಕರ್ ಅವರ ಆದರ್ಶ, ತತ್ತ್ವ ಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.


ಇಂಡಿಯನ್ ಐಡಲ್ ೇಮ್ ಖ್ಯಾತ ಗಾಯಕ ಪ್ರಸೆನ್‌ಜೀತ್ ಕೋಸಂಬಿ ಅವರು ಡಾ. ಅಂಬೇಡ್ಕರ್ ಜೀವನಗಾಥೆ ಸಾರುವ ಪ್ರೇರಣಾಪೂರಕ ಭೀಮಗೀತೆಗಳನ್ನು ಪ್ರಸ್ತುತಪಡಿಸಿದರು. ನಿರೂಪಕ ಪ್ರೊ. ಡಾ. ಸತ್ಯಜಿತ ಕೋಸಂಬಿ ಸೇರಿದಂತೆ ಇತರರು ಡಾ. ಅಂಬೇಡ್ಕರ್ ಕುರಿತು ನಾಟಕ, ಗೀತೆಗಳು, ನತ್ಯ ಮೊದಲಾದ ಕಾರ್ಯಕ್ರಮ ಸಾದರಪಡಿಸಿದರು.

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಎಂ.ಪಿ. ಪಾಟೀಲ, ರಾಜ್ಯ ಸಕ್ಕರೆ ಮಹಾಮಂಡಳದ ಅಧ್ಯಕ್ಷ ವಿಶ್ವನಾಥ ಕಮತೆ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಗುಂದೇಶಾ, ಆರ್.ವೈ. ಪಾಟೀಲ, ದಲಿತ ಮುಖಂಡ ಅಶೋಕಕುಮಾರ ಅಸೋದೆ, ಡಾ. ಅಚ್ಯುತ್ ಮಾನೆ, ಆರ್‌ಪಿಐನ ಕೊಲ್ಲಾಪುರ ಜಿಲ್ಲೆ ಅಧ್ಯಕ್ಷ ಉತ್ತಮ ಕಾಂಬಳೆ, ವಿಜಯ ಮೇತ್ರಾಣಿ, ಪ್ರತಾಪ ಮೇತ್ರಾಣಿ ಇದ್ದರು. ಬಸವಜ್ಯೋತಿ ಯೂಥ್ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.