ಜಿಲ್ಲೆ

ರಾಸಾಯನಿಕ ಹಾಕಿದರೆ ದಾಳಿ: ಡಿಸಿ ಎಚ್ಚರಿಕೆ

ಮೈಸೂರು: ಮಾವಿಗೆ ರಾಸಾಯನಿಕ (ಕೆಮಿಕಲ್) ಹಾಕಿ ಹಣ್ಣು ಮಾಡುವುದರ ವಿರುದ್ಧ ದಾಳಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಆಹಾರ ಸುರಕ್ಷತೆ ವಿಭಾಗಕ್ಕೆ ಈಗಾಗಲೇ ಸೂಚನೆ ನೀಡಲಾಗಿದ್ದು, ಎಲ್ಲಿ ಮಾವು ಮಾರಾಟ ಹೆಚ್ಚಾಗಿದೆಯೋ ಅಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನೈಸರ್ಗಿಕವಾಗಿ ಹಣ್ಣು ಮಾಡುವ ವಿಧಾನವನ್ನು ಈಗಾಗಲೇ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗಿದೆ. ಆದರೂ ಕೆಲವರು ರಾಸಾಯನಿಕ ಹಾಕಿ ಹಣ್ಣು ಮಾಡುತ್ತಿರುವ ಬಗ್ಗೆ ದೂರು ಬರುತ್ತಿವೆ ಎಂದರು.
ಸರ್ಕಾರದ ನಿರ್ದೇಶನದ ಮೇರೆಗೆ ಮುಡಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ದಟ್ಟಗಳ್ಳಿ ಸರ್ವೇ ನಂಬರ್ ಸೇರಿದಂತೆ ಇನ್ನಿತರ ಸರ್ವೇ ನಂಬರ್‌ಗಳ ಕುರಿತು ಬಂದಿರುವ ದೂರುಗಳ ಬಗ್ಗೆ ಮುಡಾ ಆಯುಕ್ತರಿಂದ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.