ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ವಿಭಜಕ

ಚಾಮರಾಜನಗರ: ಚಾಮರಾಜನಗರದಿಂದ ತಮಿಳುನಾಡಿನ ಸತ್ಯಮಂಗಲಂಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ಅವೈಜ್ಞಾನಿಕ ರಸ್ತೆ ವಿಭಜಕದಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದೆ ಎಂದು ಪ್ರಾಯಾಣಿಕರು ದೂರಿದ್ದಾರೆ.

ತಾಲೂಕಿನ ಹರದನಹಳ್ಳಿ ಮತ್ತು ವೆಂಕಟಯ್ಯನಛತ್ರ ಗ್ರಾಮಗಳ ಮಾರ್ಗಮಧ್ಯೆದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ತಿರುವು ಇದ್ದು, ಇತ್ತೀಚೆಗೆ ರಸ್ತೆಯನ್ನು ವಿಸ್ತರಿಸಿ ಹೆದ್ದಾರಿಯ ನಡುವೆ ವಿಭಜಕವನ್ನು ಅಳವಡಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ರಸ್ತೆ ವಿಭಜಕ ಇರುವುದು ತಿಳಿಯದೇ, ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿದೆ. ಇದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಪ್ರಾಯಾಣಿಕರಗಳಿಗೆ ಸಣ್ಣ-ಪುಟ್ಟ ಗಾಯಗಳಾಗುತ್ತಿದೆ.

ಕೆಲವೊಂದು ಬಾರಿ ಅಪಘಾತ ಸಂಭವಿಸಿದಾಗ ವಿಭಜಕಗಳು ಬಿದ್ದು ಹೋಗುತ್ತಿದ್ದು, ಯಾರು ಕೂಡ ಅದನ್ನು ಸರಿಪಡಿಸದೇ ಇರುವ ಕಾರಣ ಮತ್ತಷ್ಟು ಅಪಘಾತಗಳು ಸಂಭವಿಸುತ್ತಿದೆ. ಈ ರಸ್ತೆಯಲ್ಲಿ ತಮಿಳುನಾಡು ಕಡೆಗೆ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸದಂತೆ ಸಂಬಂಧ ಪಟ್ಟವರು ಅಗತ್ಯ ಕ್ರಮವಹಿಸಬೇಕು ಎಂದು ಪ್ರಾಯಾಣಿಕರು ಒತ್ತಾಯಿಸಿದ್ದಾರೆ.

ಸೂಚನಾ ಲಕವಿಲ್ಲ:

ವೆಂಕಟಯ್ಯನಛತ್ರ ಮತ್ತು ಹರದನಹಳ್ಳಿ ಗ್ರಾಮಗಳ ಮಧ್ಯೆ ಮಾರ್ಗದಲ್ಲಿ ಇರುವ ತಿರುವಿನಲ್ಲಿ ಅಗತ್ಯವಾದ ಸೂಚನಾ ಲಕಗಳನ್ನು ಅಳವಡಿಸದೇ ಇರುವುದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದೆ. ದೂರದಲ್ಲಿ ವೇಗವಾಗಿ ಬರುವ ವಾಹನಗಳಿಗೆ ರಸ್ತೆ ವಿಭಜಕ ಇರುವುದೇ ತಿಳಿಯುವುದಿಲ್ಲ. ರಾತ್ರಿವೇಳೆಯಲ್ಲಿ ವೇಗವಾಗಿ ಬರುವ ವಾಹನಗಳು ಇದರಿಂದ ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿವೆ. ಹೆದ್ದಾರಿ ತಿರುವಿನಲ್ಲಿ ವಿಭಜಕಗಳನ್ನು ಅಳವಡಿಸಿರುವುದರಿಂದ ರಸ್ತೆ ಡುಬ್ಬಗಳನ್ನು ನಿರ್ಮಿಸಬೇಕಿತ್ತು. ಆದರೇ ವೇಗನಿಯಂತ್ರಕ ಅಳವಡಿಸದೇ ಇರುವುದರಿಂದಲೂ ಅಪಘಾತವಾಗುತ್ತಿದೆ ಎಂದು ಕೋಡಿಉಗನೆ ಗ್ರಾಮದ ಅಲೋಕ್ ಎಂಬುವವರು ವಿಜಯವಾಣಿ ಜತೆಗೆ ಮಾತನಾಡಿ ದೂರಿದರು.

ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಅವೈಜ್ಞಾನಿಕವಾಗಿ ವಿಭಜಕಗಳನ್ನು ಅಳವಡಿಸಿರುವದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದೆ. ಯಾವುದೇ ಸೂಚನಾ ಲಕಗಳನ್ನು ಅಳವಡಿಸದೇ ಇರುವುದರಿಂದ ವೇಗವಾಗಿ ಬರುವ ವಾಹನಗಳು ನೇರವಾಗಿ ವಿಭಜಕಗಳಿಗೆ ಡಿಕ್ಕಿಯಾಗುತ್ತಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಭಂದ ಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು.

-ಅಲೋಕ್, ಕೋಡಿಉಗನೆ ಗ್ರಾಮ, ಚಾಮರಾಜನಗರ