ಜಿಲ್ಲೆ

ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಬೃಹತ್ ಪ್ರತಿಭಟನೆ


ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75 ರ ಅವ್ಯವಸ್ಥೆ ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.


ಪ್ರತಿಭಟನೆ ಅಂಗವಾಗಿ ಪಟ್ಟಣದ ತೇಜಸ್ವಿ ಚಿತ್ರಮಂದಿರದಿಂದ ಹೊರಟ ಪ್ರತಿಭಟನಕಾರರು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಕಂಪನಿಯ ಅಣುಕು ಶವಯಾತ್ರೆಯನ್ನು ಆ್ಯಂಬುಲೆನ್ಸ್‌ನೊಂದಿಗೆ ಹೇಮಾವತಿ ಸೇತುವೆಯಿಂದ ಹಳೇ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿ‘ಟನೆ ನಡೆಸಿ ಅಣುಕು ಶವವನ್ನು ಸುಟ್ಟು ಹಾಕಿದರು.

ನಂತರ ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ಸಂಘಟನೆಯ ಜಿಲ್ಲಾ‘್ಯಕ್ಷ ಸತೀಶ್ ಪಟೇಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಹಾಸನದಿಂದ ಮಾರನಹಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಠಥ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವ ರಾಜ್ ಕಮಲ್ ಕಂಪನಿ ಕಾಮಗಾರಿಯನ್ನು ಬಹಳ ವಿಳಂಬವಾಗಿ ಮಾಡುತ್ತಿದೆ. ಬಾಳ್ಳುಪೇಟೆಯಿಂದ ಮಾರನಹಳ್ಳಿವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರು ಸಹ ಮರುಡಾಂಬರಿಕರಣಕ್ಕೆ ಯಾವುದೆ ಕ್ರಮ ಕೈಗೊಂಡಿರುವುದಿಲ್ಲ. ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರ ದುರಸ್ತಿ ಕಾರ್ಯವನ್ನು ಹೆದ್ದಾರಿ ಪ್ರಾಧಿಕಾರದವರು ನಡೆಸದಿರುವುದರಿಂದ ಪಟ್ಟಣದ ಒಳಭಗದಲ್ಲಿ ಹೋಗಿರುವ ರಸ್ತೆ ಸಂಪೂರ್ಣ ಗುಂಡಿಯಾಗಿದೆ ಹಾಗೂ ಹೇಮಾವತಿ ನದಿ ಸೇತುವೆಯ ಮೇಲ್ಭಾಗದಲ್ಲಿ ಡಾಂಬರ್ ಮಳೆಯಿಂದಾಗಿ ಕಿತ್ತು ಹೋಗಿದ್ದು ಅದನ್ನು ಕೂಡಲೆ ದುರಸ್ತಿ ಮಾಡಿಸಬೇಕು. ಇನ್ನೊಂದು ತಿಂಗಳ ಒಳಗೆ ಬಾಳ್ಳುಪೇಟೆಯಿಂದ ಸಕಲೇಶಪುರ ಮಾರನಹಳ್ಳಿವರೆಗಿನ ರಸ್ತೆಗೆ ಮರುಡಾಂಬರಿಕರಣ ಮಾಡಲು ಒಂದು ತಿಂಗಳ ಕಾಲವಕಾಶ ನೀಡಲಾಗುತ್ತದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.


ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಮಾತನಾಡಿ ಪಟ್ಟಣದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಳೆ ಹಾಗೂ ಹೊಸ ಸೇತುವೆಗೆ ವಿದ್ಯುತ್ ದೀಪಗಳು ಇಲ್ಲದೆ ಜನರು ಸಂಚರಿಸಲು ತೊಂದರೆ ಯಾಗುತಿದೆ. ಕೂಡಲೆ ಇಲ್ಲಿ ಬೀದಿ ದೀಪ ಹಾಕಲು ಕ್ರಮ ಕೈಗೊಳ್ಳಬೇಕು. ಪಟ್ಟಣ ವ್ಯಾಪ್ತಿ ರಸ್ತೆಯ ಬದಿ ಕಾಡಿನಂತಾಗಿದ್ದು ಕೂಡಲೆ ಇದನ್ನು ಸ್ವಚ್ಛಗೊಳಿಸಬೇಕು ಹಾಗೂ ತೇಜಸ್ವಿ ಚಿತ್ರಮಂದಿರದ ಸಮೀಪ ವೃತ್ತ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.


ಪ್ರತಿಭಟನೆಯ ನಂತರ ಕಾರ್ಯಕರ್ತರು ಹಾಸನಕ್ಕೆ ಹೋಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ 75ನ್ನು ಮರುಡಾಂಬರಿಕರಣ ಮಾಡುವಂತೆ ಮನವಿ ಸಲ್ಲಿಸಲಾಯಿತು.


ಈ ಸಂರ್ಧಭದಲ್ಲಿ ಸಂಘಟನೆಯ ಮುಖಂಡರುಗಳಾದ ವೀರೇಶ್, ಹರೀಶ್,ಶರಣ್, ಬೆಳಗೋಡು ಬಸವರಾಜ್, ರವಿನಾರಾಯಣ, ಕೃಷ್ಞಪ್ಪ ಪೂಜಾರಿ ಮುಂತಾದವರು ಹಾಜರಿದ್ದರು.