ಸಿರಗುಪ್ಪ: ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ದುರಸ್ತಿಗೆ ಆಗ್ರಹಿಸಿ ಉಪತಹಸೀಲ್ದಾರ್ ಸಿದ್ಧಾರ್ಥ ಕಾರಂಜಿಗೆ ಸಾರ್ವಜನಿಕರು ಮಂಗಳವಾರ ಮನವಿ ಸಲ್ಲಿಸಿದರು.
ಪ್ರಮುಖ ಎಂ.ಗೋಪಾಲಕೃಷ್ಣ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ದಿನೇ ದಿನೆ ತೀವ್ರ ಹದಗೆಡುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ ಅಪಘಾತಗಳು ಹೆಚ್ಚಾಗುತ್ತಿವೆ. ದುರಸ್ತಿಗೆ ಮುಂದಾಗದಿದ್ದಲ್ಲಿ ಆ.23 ರಂದು ನಗರದ ಕೆ.ಇ.ಬಿ ಗಣೇಶ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.