Invitation to a poetry competition 
ಜಿಲ್ಲೆ

ರಾಷ್ಟ್ರೀಯ ಸಮ್ಮೇಳನ

ಗಿರೀಶ ಸಗರ

ವಿಜಯಪುರ: ನಗರದ ಎಸ್​ಬಿ ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ. 21 ಮತ್ತು ಫೆ.22 ರಂದು ಎರಡು ದಿನ ಜೈವಿಕ ವಿಜ್ಞಾನದ ಗಡಿಗಳು : ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.

ಮಹಾವಿದ್ಯಾಲಯದ ಸಸ್ಯಶಾಸ ವಿಭಾಗ, ಕಲಬುರಗಿಯ ಖಾಜಾ ಬಂದೇನವಾಜ್​ ವಿಶ್ವವಿದ್ಯಾಲಯ ಹಾಗೂ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸಮ್ಮೇಳನ ಆಯೋಜಿಲಾಗಿದೆ.

ಫೆ. 21 ರಂದು ಬೆಳಗ್ಗೆ 10ಕ್ಕೆ ಹಿಟ್ನಳ್ಳಿ ಕೃಷಿ ವಿವಿ ಡೀನ್​ ಡಾ. ಅಶೋಕ ಸಜ್ಜನ ಕಾರ್ಯಕ್ರಮ ಉದ್ಘಾಟಿಸುವರು. ಬಿಎಲ್​ಡಿಇ ಸಂಸ್ಥೆಯ ಪ್ರೊ. ವೈ.ಎಂ. ಜಯರಾಜ್​ ಅಧ್ಯಕ್ಷತೆ ವಹಿಸುವರು. ಡಾ. ರಾವೇಂದ್ರ ಕುಲಕರ್ಣಿ, ಪ್ರೊ. ವಿ.ಎಸ್​. ಬಗಲಿ ಆಗಮಿಸುವರು. ಐಕ್ಯೂಎಸಿ ನಿರ್ದೇಶಕ ಡಾ. ಪಿ.ಎಸ್​. ಪಾಟೀಲ, ಡಾ. ಸಯ್ಯದ್​ ಅಬ್ರಾರ್​ ಹಾಗೂ ಡಾ. ರಾಮಚಂದ್ರ ನಾಯಕ್​ ಎಂ., ಉಪಸ್ಥಿತಿತರಿರುವರು.

ಫೆ. 22 ರಂದು ಸಂಜೆ 4ಕ್ಕೆ ಅತಿಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ನಡಯಲಿದ್ದು, ಡಾ. ನಿಶಾಂತ ಆರಿಫ್​ ಹುಸೇನ್​ ಭಾಗವಹಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಆರ್​.ಎಂ. ಮಿರ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.