ಬೇಲೂರು: ಪಟ್ಟಣದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸಂಸ್ಥೆಯ ಎಲ್ಲ ಶಿಕ್ಷಕರಿಗಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶಿಕ್ಷಣ ತಜ್ಞ ಡಾ.ಕೆ.ಸಿ.ಮಂಜುನಾಥ್ ವಿಶೇಷ ಕಾರ್ಯಾಗಾರ ನಡೆಸಿದರು.
ಬೇಲೂರಿನ ಪೂರ್ಣಪ್ರಜ್ಞ ವಿದ್ಯಾ ಕೇಂದ್ರದ ಶ್ರೀವಿಬುಧೇಶ ತೀರ್ಥ ಸಭಾಂಗಣದಲ್ಲಿ ಸಂಸ್ಥೆಯ ಶಿಕ್ಷಕರಿಗೆ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಡಾ.ಸಿ.ಕೆ.ಮಂಜುನಾಥ್ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿಶೇಷತೆಗಳ ಬಗ್ಗೆ ಹಾಗೂ ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕುರಿತು ಶಿಕ್ಷಕರು ಯಾವ ರೀತಿ ಸಿದ್ಧರಾಗಬೇಕು ಎಂಬುದನ್ನು ವಿವಿಧ ಚಟುವಟಿಕೆಗಳು ಮತ್ತು ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.
ಪೂರ್ಣಪ್ರಜ್ಞ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಕೆ.ಭಟ್, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಅತುಲ್ ಭಟ್, ಕಾರ್ಯದರ್ಶಿ ಅನಂತಸ್ವಾಮಿ, ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಪ್ರಾಥಮಿಕ ಶಾಲಾ ಪ್ರಾಂಶುಪಾಲೆ ಸುನಿತಾ ಕುಮಾರಿ ಇದ್ದರು.