ವಿಜಯಪುರ: ರಾಷ್ಟ್ರೀಯ ಶಸಚಿಕಿತ್ಸಕರ ಪ್ರಥಮ ದಿನಾಚರಣೆ ಅಂಗವಾಗಿ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಶಸಚಿಕಿತ್ಸೆ ವಿಭಾಗದ ವತಿಯಿಂದ ಜಿಲ್ಲಾ ಶಸಚಿಕಿತ್ಸಕರ ಸಂದ ಸಹಯೋಗದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಜಿಕ್ವಿಜ್ ರಸಪ್ರಶ್ನೆ ಕಾರ್ಯಕ್ರಮ ಶನಿವಾರ ನಡೆಯಿತು.
ಶಸಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಮೊದಲ ಬಾರಿಗೆ ಪ್ರಥಮ ರಾಷ್ಟ್ರೀಯ ಶಸ ಚಿಕಿತ್ಸಕರ ದಿನ ಆಚರಿಸಲಾಗುತ್ತಿದೆ. ಜನಸಾಮಾನ್ಯರಿಗೆ ಶಸ ಚಿಕಿತ್ಸಕರ ಮಹತ್ವ ತಿಳಿಸುವುದು ಮತ್ತು ಸ್ನಾತಕ ವೈದ್ಯಕಿಯ ವಿದ್ಯಾರ್ಥಿಗಳಲ್ಲಿ ಶಸ ಚಿಕಿತ್ಸಾ ವಿಭಾಗದ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವಿಧಾನವಾಗಿದ್ದು, ಾನದ ಜತೆಗೆ ಸಮಯ ಪ್ರೆ, ವಿಶ್ಲೇಷಣೆ ಸಾಮರ್ಥ್ಯಗಳನ್ನು ಅಳೆಯುವ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.
ಕ್ವಿಜ್ ಮೂಲಕ ಅಂತಿಮ ಸುತ್ತಿಗೆ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತಲಾ ಮೂರು ವಿದ್ಯಾರ್ಥಿಗಳ 5 ತಂಡ ರಚಿಸಲಾಗಿತ್ತು. ತಂಡಗಳಿಗೆ ಬಿಎಲ್ಡಿಇ ಆಸ್ಪತ್ರೆಯ ಶಸ ಚಿಕಿತ್ಸಾ ವಿಭಾಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ವೈದ್ಯರ ಹೆಸರುಗಳನ್ನು ಇಡಲಾಗಿತ್ತು.
ಕ್ವಿಜ್ ಮಾಸ್ಟರ್ ಡಾ. ದೀಪಕ ಚವ್ಹಾಣ ಸರ್ಜಿಕ್ವಿಕ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಪಿ.ಎಲ್. ಕರಿಹೋಳು ತಂಡದ ಅನುಷ್ಕಾ ಸಿಂಗ್, ಅನುಷ್ಕಾ ಪಾಂಡೆ ಮತ್ತು ಭಾವನಾ ಸುಂಕರಾ ಪ್ರಥಮ ಸ್ಥಾನ ಹಾಗೂ ಡಾ. ಆರ್.ಎಸ್. ಕುಲಕರ್ಣಿ ತಂಡದ ಸಾಧನ ಮೊಹಾಪಾತ್ರಾ, ರೋಹನ್ ರಾಯಕರ ಮತ್ತು ಗೌರಿ ಮಿಶ್ರಾ ರನ್ನರ್ ಅಪ್ ಪ್ರಶಸ್ತಿ ಪಡೆದರು.
ಅಲ್& ಅಮೀನ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಜಿಲಾನಿ ಅವಟಿ, ಪ್ರಾಧ್ಯಾಪಕ ಡಾ. ನಿಶಿಕಾಂತ ಗುಜರ, ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಅರವಿಂದ ಪಾಟೀಲ, ಫ್ಯಾಕಲ್ಟಿ ಆಫ್ ಮೆಡಿಸಿನ್ ಡೀನ್ ಡಾ. ತೇಜಸ್ವಿನಿ ವಲ್ಲಭ, ಡಾ. ಗಿರೀಶ ಕುಲ್ಲೊಳ್ಳಿ ಹಾಗೂ ಜಿಲ್ಲಾ ಶಸ ಚಿಕಿತ್ಸಕರ ಸಂದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪ್ರಶಸ್ತಿಗಳನ್ನು ವಿತರಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಸಾವಂತ, ಡಾ. ಶಿವರಾಜ ಮಂಗ್ಯಾಳ, ಡಾ. ಸಂತೋಷ ಮಡಗೊಂಡ, ಡಾ. ಅವಿನಾಶ ಹಂಚನಾಳ, ಡಾ. ವೀಣಾ ಂಟೆಪ್ಪಗೋಳ ಮತ್ತಿತರರಿದ್ದರು.