ಜಿಲ್ಲೆ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 8 ಪ್ರಕರಣ ಇತ್ಯರ್ಥ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಶುಕ್ರವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಅವರು ನ್ಯಾಯಾಂಗ ಸಂಧಾನಕಾರರಾಗಿ ಮತ್ತು ಸ್ಥಳೀಯ ವಕೀಲ ಎಂ.ಬಿ. ಬೆಂತೂರ ಅವರು ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು. ಲೋಕ್ ಅದಾಲತ್‌ನಲ್ಲಿ 4 ದೂರು ಪ್ರಕರಣಗಳು ಮತ್ತು 4 ನೋಟಿಸ್ (ಅಮಲಜಾರಿ) ಪ್ರಕರಣಗಳು ರಾಜಿಯಾಗಿ ಇತ್ಯರ್ಥವಾದವು. ಲೋಕ ಅದಾಲತ್‌ನಲ್ಲಿ ಗ್ರಾಹಕರಿಗೆ 27,82,673 ರೂಪಾಯಿ ಪರಿಹಾರ ನೀಡಲಾಯಿತು.