ಮುದ್ದೇಬಿಹಾಳ ಪಟ್ಟಣದಲ್ಲಿ ಸೇವಾ ಫೌಂಡೇಷನ್ ವತಿಯಿಂದ ಡಾ. ಚೌಧರಿ ಫಿಸಿಯೋಥೆರಪಿ ಕ್ಲಿನಿಕ್‌ದಲ್ಲಿ ರಾಷ್ಟ್ರೀಯ ಫಿಸಿಯೋಥೆರಪಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ವೈದ್ಯ ಡಾ. ಯೂನೂಸ ಚೌಧರಿ ಮಗುವಿನ ಆರೋಗ್ಯ ತಪಾಸಣೆ ನಡೆಸಿದರು. 
ಜಿಲ್ಲೆ

ರಾಷ್ಟ್ರೀಯ ಫಿಜಿಯೋಥೆರಪಿ ದಿನಾಚರಣೆ

ಮುದ್ದೇಬಿಹಾಳ: ಪಟ್ಟಣದ ಸೇವಾ ಫೌಂಡೇಷನ್ ವತಿಯಿಂದ ಡಾ. ಚೌಧರಿ ಫಿಜಿಯೋಥೆರಪಿ ಕ್ಲಿನಿಕ್‌ನಲ್ಲಿ ರೋಗಿಗಳ (ನರ ಹಾಗೂ ಎಲುಬು ನೋವು) ಉಚಿತ ತಪಾಸಣೆ ಹಾಗೂ ಕೌನ್ಸಿಲಿಂಗ್ ನಡೆಸಲಾಯಿತು.

ವಿಜಯಪುರದ ವೈದ್ಯ ಡಾ. ಯೂನೂಸ್ ಚೌಧರಿ ಮಾತನಾಡಿ, ಮನುಷ್ಯ ಆರೋಗ್ಯದಿಂದ ಇರಲು ಫಿಜಿಯೋಥೆರಪಿ ಮಾಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು. ಡಾ. ಇಲಿಯಾಸ್ ಪಠಾಣ, ಡಾ. ಕುದ್ದುಸ್ ಚೌಧರಿ ರೋಗಿಗಳ ತಪಾಸಣೆ ನಡೆಸಿದರು. ಸೇವಾ ಫೌಂಡೇಷನ್ ಅಧ್ಯಕ್ಷ ಡಿ.ಎಂ.ಚೌಧರಿ ಇದ್ದರು.