ಜಿಲ್ಲೆ

ರಾಷ್ಟ್ರೀಯ ಅಥ್ಲೆಟಿಕ್ಸ್ ಪಂದ್ಯಾವಳಿಗೆ ಆಯ್ಕೆ

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಅಂತರ್‌ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ನಗರದ ಡ್ರೀ ಮ್ಸ್ ಸ್ಪೋರ್ಟ್ಸ್ ಆ್ಯಂಡ್ ಫಿಟ್ನೆಸ್ ಅಕಾಡೆಮಿಯ 14 ಹಾಗೂ 16 ವರ್ಷದೊಳಗಿನ ನಾಲ್ವರು ಕ್ರೀಡಾಪಟುಗಳು 19ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಫೆ.16ರಿಂದ 18ರವರೆಗೆ ಅಹ್ಮದಾಬಾದ್‌ನ ನವರಂಗಪುರದ ಗುಜರಾತ್‌ವಿವಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಶ್ರೀಹರಿ(ಗುಂಡು ಎಸೆತ)ಬಾಲಕಿಯರ ವಿಭಾಗದಲ್ಲಿ ಜೆ.ಲಕ್ಷಾ(60 ಮೀಟರ್ ಓಟ)ಎಚ್.ರಿತಿಕಾ(ಟ್ರಯಥ್ಲಾನ್)ಹಾಗೂ ವೈಷ್ಣವಿ ಎಂ. ಕುಂ ಬಾರ (ಪೆಂಟಾಥ್ಲಾನ್)ಅವರು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳ ಈ ಸಾಧನೆಗೆ ಅಕಾಡೆಮಿ ಅಧ್ಯಕ್ಷ ದೀಪಕ್,ಪದಾಧಿಕಾರಿ ಪ್ರಶಾಂತ್ ಹಾಗೂ ತರಬೇತಿದಾರ ಶಿವಕುಮಾರ್ ಹರ್ಷವ್ಯಕ್ತಪಡಿಸಿದ್ದಾರೆ.