ಚಿತ್ರದುರ್ಗ: ನೀಟ್ ಫಲಿತಾಂಶದಲ್ಲಿ 179ನೇ ರ್ಯಾಂಕ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಎಸ್‌ಆರ್‌ಎಸ್ ಕಾಲೇಜಿನ ವಿದ್ಯಾರ್ಥಿ ಎನ್.ಮದನ್ ಅತ್ಯುತ್ತಮ ಸಾಧನೆಗೈದಿದ್ದಾನೆ.
ಕಾಲೇಜಿನ ವಿದ್ಯಾರ್ಥಿಗಳು 2024ನೇ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ (ನೀಟ್) ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್‌ಗಳೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿದ್ದಾರೆ.
ಎನ್.ಮದನ್ 179ನೇ ರ್ಯಾಂಕ್, ಪಿ.ಟಿ.ಸೃಜನ್ 278, ಇ.ಜೀವಿಕಾ 950ನೇ ರ್ಯಾಂಕ್‌ನೊಂದಿಗೆ ದಾಖಲೆ ನಿರ್ಮಿಸಿದ್ದಾರೆ. ಎಚ್.ವೈ.ಪ್ರಣತಿ, ಎಸ್.ನೇಹಾ ತಲಾ 674, ಎಂ.ಮನೋಜ್, ರಕ್ಷಿತಾ ಬಳ್ಳಿ ತಲಾ 663, ಚಂದ್ರಿಕಾ ಕಲ್ಯಾಣಿ 662, ಜಿ.ಸಂಜಯ್ 643, ಇ.ಜೀವಿಕಾ 637, ಹಿಮಂತ್‌ರಾಜ್ 630, ಸೃಜನ್ 627, ಪ್ರತಾಪ್‌ಸಿಂಗ್ 624, ಪಿ.ಆಕಾಶ್ 604, ದೀಕ್ಷಾ ಪೂಜಾರ್ 602 ಅಂಕ ಪಡೆದಿದ್ದಾರೆ.
600ಕ್ಕಿಂತ ಅಧಿಕ ಅಂಕ ಒಟ್ಟು 20 ವಿದ್ಯಾರ್ಥಿಗಳು ಪಡೆದಿದ್ದು, ಕಾಲೇಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಿರಂತರ ತರಬೇತಿ ಪಡೆದ ಕಾಲೇಜಿನ ಒಟ್ಟು 80 ವಿದ್ಯಾರ್ಥಿಗಳಲ್ಲಿ 50 ಮಂದಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಅರ್ಹರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.