ಜಿಲ್ಲೆ

ರಾಷ್ಟ್ರಮಟ್ಟದ ಮ್ಯೂಸಿಕ್ ಸ್ಪರ್ಧೆಗೆ ಆಯ್ಕೆ

ಚಾಮರಾಜನಗರ: ಜವಾಹರ ನವೋದಯ ವಿದ್ಯಾಲಯ ಸಮಿತಿಯು ಪಿಎಂ ಶ್ರೀ ಜವಾಹರ್  ನವೋದಯ ವಿದ್ಯಾಲಯಗಳ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲು ಆಯೋಜಿಸಿದ್ದ ವಿವಿಧ ವಿಭಾಗದ ಸ್ಪರ್ಧೆಗಳ ಕ್ಲಸ್ಟರ್ ಮಟ್ಟದ ಜೆಎನ್ ವಿ ಹಾಸನದಲ್ಲಿ  ಆನ್ಲೈನ್ ಮುಖಾಂತರ ನಡೆಸಲಾಯಿತು.

ವಿಶಾಖಪಟ್ಟಣಂ, ಕ್ಯಾಲಿಕಟ್, ನಾಗರ್ಕುನಾಲ್, ಕಣ್ಣೂರು, ಕರ್ನಾಟಕ,‌‌ ಕೇರಳ, ತಮಿಳುನಾಡು ,ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ಸುಮಾರು 50 ಕ್ಕಿಂತಲೂ ಹೆಚ್ಚು ನವೋದಯ ಶಾಲೆಯ ಮಕ್ಕಳು  ಭಾಗವಹಿಸಿದ್ದರು. ಹಾಸನ ಕ್ಲಸ್ಟರ್ ನಿಂದ ಇನ್ಸ್ಟ್ರುಮೆಂಟಲ್ ಮ್ಯೂಸಿಕ್ ನಲ್ಲಿ ಸ್ಪರ್ಧಿಸಿದ್ದ ಜಯಂತ್ ಜನಾರ್ಧನ್. ಕೆ. ಎಲ್ ಎಂಟನೇ ತರಗತಿ ,ಮೆಚ್ಚುಗೆ ಪಡೆದು ಮುಂದಿನ ರೀಜನಲ್ ಹಂತ ಬೆಂಗಳೂರು ನವೋದಯ ವಿದ್ಯಾಲಯ ಅರ್ಬನ್ ನಲ್ಲಿ ಭಾಗವಹಿಸಿದ್ದು,   ಪ್ರಸ್ತುತ ಜವಹರ ವಿದ್ಯಾಲಯ ಹೊಂಡರಬಾಳು ಚಾಮರಾಜನಗರದ ವಿದ್ಯಾರ್ಥಿಯು ರೀಜನಲ್ ಹಂತದಲ್ಲೂ ಮೊದಲ ಸ್ಥಾನ ಪಡೆದು ಡಿ. 18 ,19 ,20 ರಂದು ಮೂರು ದಿನಗಳ ಕಾಲ  ಹೈದರಾಬಾದಿನ ಕನ್ಹ ಹಳ್ಳಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಈ ವಿದ್ಯಾರ್ಥಿಗೆ  ನಟರಂಗ ನಿರ್ದೇಶಕ  ಕಿರಣ್ ಕುಮಾರ್ ಗಿರ್ಗಿ ತರಬೇತಿ ನೀಡಿದ್ದರು.  ಯಳಂದೂರು ತಾಲೂಕಿನ‌  ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಲಕ್ಷ್ಮೀ, ಕೇಶವದಾಸ್ ದಂಪತಿ ಪುತ್ರ .

ಅಭಿನಂದನೆ:  ರಾಷ್ಟ್ರದ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿ  ಜಯಂತ್ ಗೆ ಶಾಲೆಯ ಪ್ರಾಂಶುಪಾಲ ಜೆ. ಪ್ರೀತಾ  ,ಉಪ ಪ್ರಾಂಶುಪಾಲ   ಡಾ. ದಿನೇಶ್, ಶಿಬಿರದ ಸಂಚಾಲಕ ಮೋಹನ್ ಕುಮಾರ್ ,ಸಂಗೀತ ನಿರ್ದೇಶಕ ಬಿ. ಶುಭಕರ ಪುತ್ತೂರು ಮತ್ತು ಸಹಕರಿಸಿದ ನವೋದಯದ ಎಲ್ಲಾ ಸಿಬ್ಬಂದಿಗಳಿಗೂ ಶಾಲಾ ವತಿಯಿಂದ  ಅಭಿನಂದೆ ಸಲ್ಲಿಸಿ,  ಜಯಂತ್ ರಾಷ್ಟ್ರಮಟ್ಟದಲ್ಲೂ ಗೆದ್ದು ಬರಲಿ ಎಂದು  ಶುಭಕೋರಿದ್ದಾರೆ.