Oplus_131072 
ಜಿಲ್ಲೆ

ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿ

ಬಸವಕಲ್ಯಾಣ: ಪ್ರತಿಯೊಬ್ಬ ಪ್ರಜೆ ಜ್ಞಾನವಂತನಾಗಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಬೇಕು ಎಂದು ವೈಚಾರಿಕ ಚಿಂತಕ, ನಟ ಚೇತನ ಅಹಿಂಸಾ ಹೇಳಿದರು.

ನಗರದ ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಹೋರಾಟದ ಫಲದಿಂದ ಇಂದು ನಮ್ಮ ರಾಷ್ಟ್ರದ ಕಟ್ಟಕಡೆಯ ಜನಸಾಮಾನ್ಯ ವ್ಯಕ್ತಿಗೂ ಸರ್ವರಂಗದಲ್ಲಿ ಸಮಾನತೆ ಹಕ್ಕು ದೊರೆತು, ತಲೆ ಎತ್ತಿ ಬದುಕಲು ಸಾಧ್ಯವಾಗಿದೆ ಎಂದರು.

ಪ್ರಾಚಾರ್ಯ ಡಾ.ಜೈಶೇನಪ್ರಸಾದ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಅನಸೂಯಾ ಮಂಠಾಳಕರ, ಶ್ರೀಧರ ಛಲವಾದಿ, ಶೇಖ್ ಎಸ್.ಕೆ., ಸತೀಶ ಕಾಂಬಳೆ, ನಿತ್ಯಾನಂದ ಮಂಠಾಳಕರ, ರಾಹುಲ್ ಶಿಂಧೆ, ಜೈಭೀಮ ಕೊಳೆ, ರಾಹುಲ್ ತುತಾರೆ, ದೀಪಕ ಮೋರೆ, ಶಿಲ್ಪಾ ಕಾಲೇಬಾಗ್, ಶಂಕರ ಫುಲೆ, ಶ್ರೀನಿವಾಸ ಫುಲೆ ಮತ್ತು ವಿದ್ಯಾರ್ಥಿಗಳು ಇದ್ದರು.

ಚೇತನ ಅಹಿಂಸಾ ಅವರನ್ನು ಡಾ.ಅಂಬೇಡ್ಕರ್ ಅರ್ಬನ್ ಯುಥ್ ಕ್ಲಬ್‌ನ ಅಧ್ಯಕ್ಷ ರವಿ ಗಾಯಕವಾಡ ಹಾಗೂ ನರಸಿಂಗರಾವ ಕಾಂಬಳೆ ಸನ್ಮಾನಿಸಿದರು.