ಜಿಲ್ಲೆ

ರಾಷ್ಟ್ರ ಮಟ್ಟದ ಶಿಬಿರಕ್ಕೆ ಬಸವರಾಜ ಆಯ್ಕೆ

ರಾಷ್ಟ್ರ ಮಟ್ಟದ ಶಿಬಿರಕ್ಕೆ ಬಸವರಾಜ ಆಯ್ಕೆ

ಬೆಳಗಾವಿ : ಉತ್ತರಾಖಂಡ ರಾಜ್ಯದ ಕೌಸನಿಯಲ್ಲಿ ಅ. 12 ರಿಂದ15 ರವರೆಗೂ ನಡೆಯಲಿರುವ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಗಾಂಧಿ ತತ್ವ ಪ್ರೇಣಿತ ಶಿಬಿರಕ್ಕೆ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿದ್ಯಾರ್ಥಿ ಬಸವರಾಜ ಶೆಗುಣಶಿ ಆಯ್ಕೆಯಾಗಿದ್ದಾರೆ.

ರಾಷ್ಟ್ರ ಮಟ್ಟದ ಶಿಬಿರಕ್ಕೆ ಆಯ್ಕೆಯಾದ ವಿದ್ಯಾರ್ಥಿ ಬಸವರಾಜ ಶೆಗುಣಶಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ, ಕುಲಸಚಿವ ಸಂತೋಷ ಕಾಮಗೌಡ ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಶುಭ ಹಾರೈಸಿ,ಅಭಿನಂದನ ಸಲ್ಲಿಸಿದ್ದಾರೆ.