ಜಿಲ್ಲೆ

ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾಕೂಟಕ್ಕೆ ಆಯ್ಕೆ

ಗುಂಡ್ಲುಪೇಟೆ: ಮಹಾರಾಷ್ಟ್ರದ ಬಾಲಿವಾಡಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಖಿಲ ಭಾರತ ನಾಗರಿಕ ಸೇವಾ ಕುಸ್ತಿ ಕ್ರೀಡಾಕೂಟಕ್ಕೆ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಅಣ್ಣೂರು ಕೇರಿ ಪ್ರೌಢಶಾಲಾ ಶಿಕ್ಷಕ ಮಂಜುನಾಥ್ ಎಳಮೇಲಿ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಧುಸೂದನ್, ಸಂಪನ್ಮೂಲ ವ್ಯಕ್ತಿ ಡಾ.ಸರೋಜಾ ಅವರು ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸನ್ಮಾನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಯ್ಯ, ವಿಭಾಗೀಯ ರಾಜ್ಯ ಉಪಾಧ್ಯಕ್ಷ ದಿನೇಶ್, ರುದ್ರಸ್ವಾಮಿ, ಸಿದ್ದರಾಜು, ಮಣಿಕಂಠಾಚಾರಿ, ಜಯರಾಮ್ ನಟರಾಜ್, ಸ್ವಾಮಿ, ಮಾದೇಗೌಡ , ಮಲ್ಲೇಶ್ ಮಂಜುಳಾ ಹಾಗೂ ಇತರರು ಇದ್ದರು.