ಶಹಾಬಾದ್: ಚಿತ್ತಾಪುರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ರಾವೂರಿನ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯ ಮಕ್ಕಳು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ 4*100 ರಿಲೆ- ಸಾಹಿಲ್, ದೇವರಾಜ, ತಾಯಪ್ಪ, ಯೋಗೇಶ (ಪ್ರಥಮ), ಬಾಲಕಿಯರ ಥ್ರೋಬಾಲ್- ಹರ್ಮೈನ್, ಐಶ್ವರ್ಯ, ಸಂಜನಾ, ತೇಜಸ್ವಿನಿ, ಸವಿತಾ, ಸಾಕ್ಷಿ, ಭಾಗ್ಯಶ್ರೀ, ತ್ರಿವೇಣಿ, ಐಶ್ವರ್ಯ, ಸುಮಯ್ಯ, ಸುರೇಖಾ (ಪ್ರಥಮ), ಗುಂಡು ಎಸೆತದಲ್ಲಿ ತೇಜಸ್ವಿನಿ ರಾಜು (ಪ್ರಥಮ), ಬಾಲಕರ 400 ಮೀ. ಓಟದಲ್ಲಿ ದೇವರಾಜ ದುರ್ಗರಾಜ (ದ್ವಿತೀಯ) ಸೇರಿ ಇನ್ನಿತರ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಗಮನಸೆಳೆದಿದ್ದಾರೆ.
ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಉಪಾಧ್ಯಕ್ಷ ಚನ್ನಣ್ಣ ಬಾಳಿ, ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಮುಖ್ಯಗುರು ವಿದ್ಯಾಧರ ಖಂಡಾಳೆ, ದೈಹಿಕ ಶಿಕ್ಷಕ ಶಿವಕುಮಾರ ಸರಡಗಿ, ಎನ್‌ಸಿಸಿ ಅಧಿಕಾರಿ ಶರಣು ಸಜ್ಜನ್, ಶಿಕ್ಷಕ ಸಿದ್ದಲಿಂಗ ಬಾಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.