ಜಿಲ್ಲೆ

ರಾವೂರ ಬಳಿ ಅಪಘಾತ ಬೈಕ್ ಸವಾರ ಸಾವು

ಕಲಬುರಗಿ
ಶಹಾಬಾದ್: ರಾವೂರ-ಚಿತ್ತಾಪುರ ರಸ್ತೆಯಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡು ಚಿತ್ತಾಪುರ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಟಾಟಾ ಎಸಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ರಾವೂರದ ಹಣಮಂತ ಅಚ್ಚೋಲಿ (೩೮) ಮೃತಪಟ್ಟವ. ಈತ ಮಧ್ಯಾಹ್ನ ವಿರುಪಾP್ಷÀಯ್ಯ ಅರಳಿಗಿಡ ಅವರ ಹೊಲಕ್ಕೆ ಕೆಲಸಗಾರರನ್ನು ಬಿಟ್ಟು ಹಿಂತಿರುಗುವಾಗ ಯರಗಲ್ ಕ್ರಾಸ್, ಅಬ್ಬಾಸ್ ಅಲಿ ದರ್ಗಾ ಮಧ್ಯೆ ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಹೊಡೆದಿz್ದÁನೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಾಡಿ ಠಾಣೆಯಲ್ಲಿ ದಾಖಲಾಗಿದೆ.