ಜಿಲ್ಲೆ

ರಾವಂದೂರು ಕೃಷಿ ಪತ್ತಿನ ಸಂಘಕ್ಕೆ ಮರಿಗೌಡ ಅಧ್ಯಕ್ಷ

ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮರಿಗೌಡ, ಉಪಾಧ್ಯಕ್ಷರಾಗಿ ರಫಿ ಅವಿರೋಧವಾಗಿ ಆಯ್ಕೆಯಾದರು.


ಬುಧವಾರ ಚುನಾವಣಾ ಪ್ರಕಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಮರೀಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ರಫಿ ಹೊರತು ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಇತೀಂದ್ರ ಅವಿರೋಧ ಆಯ್ಕೆ ಘೋಷಿಸಿದರು.

ನಂತರ ನೂತನ ಅಧ್ಯಕ್ಷ-ಉಪಾಧ್ಯಕ್ಷನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಎಚ್.ಕೆ.ಕುಮಾರ್, ಎಚ್.ಡಿ.ವಿಜಯ್, ಎ.ಅನ್ವರ್, ಎಚ್.ಆರ್.ರಮೇಶ್, ಅಬ್ದುಲ್‌ಸಮಾದ್, ಜಯಮ್ಮ, ರತ್ನಮ್ಮ, ಎಚ್.ಕೆ.ಅಣ್ಣಯ್ಯ, ಮೊಗನಾಯಕ, ಬಸವಣ್ಣ, ಕಾರ್ಯದರ್ಶಿ ಶಿವರಾಮ್ ಇತರರು ಇದ್ದರು.