ಜಿಲ್ಲೆ

ರಾಯರ ಆರಾಧನಾ ಮಹೋತ್ಸವ

Chitradurga - Desk - Pranav Kumar

ಚಿತ್ರದುರ್ಗ: ಆನೆಬಾಗಿಲು ಸಮೀಪದ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೃಂದಾವನ ಪ್ರವೇಶ ಸ್ಮರಣಾರ್ಥ ಆಚರಿಸುತ್ತಿರುವ 353ನೇ ಆರಾಧನಾ ಪಂಚರಾತ್ರೋತ್ಸವದಲ್ಲಿ ಮೂರು ದಿನದ ಆರಾಧನೆಯೂ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ 7.30ಕ್ಕೆ ಋಗ್ವೇದ, ಯಜುರ್ವೇದ, ನಿತ್ಯ, ನೂತನ ಉಪಾಕರ್ಮ ಪೂಜೆಗಳು ನಡೆದವು. ಸಂಜೆ 6.30ರ ನಂತರ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ನೆರವೇರಿತು.