ದೇವದುರ್ಗದ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಶ್ರೀ ಶಿವಣ್ಣ ತಾತ, ಶ್ರೀ ಸದ್ದಯ್ಯ ತಾತ, ಪಿಐ ಕೆ.ಹೊಸಕೇರಪ್ಪ, ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ಪ್ರಧಾನ ಕಾರ್ಯದರ್ಶಿ ನರಸಣ್ಣ ನೀಲವಂಜಿ ಇತರರಿದ್ದರು. 
ಜಿಲ್ಲೆ

ರಾಯಣ್ಣ ಹೋರಾಟ ಎಲ್ಲರಿಗೂ ಆದರ್ಶ

Gangavati - Desk - Veeresh S Ullagaddi

ವಿಜಯವಾಣಿ ಸುದ್ದಿಜಾಲ ದೇವದುರ್ಗ
ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರಿಗೆ ಮಾದರಿಯಾಗಿದ್ದಾರೆ. ಎಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.


ಪಟ್ಟಣದ ಕೆಬಿಇ ರಸ್ತೆಯ ರಾಯಣ್ಣ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಸಂಗೊಳ್ಳಿ ರಾಯಣ್ಣ ನಾಡಿನ ಹಿತಕ್ಕಾಗಿ ಜೀವನವನ್ನೇ ಮುಡುಪಾಗಿ ಇಟ್ಟರು. ಆ.15ರಂದು ಜನಿಸಿದ ಸಂಗೊಳ್ಳಿ ರಾಯಣ್ಣ, ಜ.26ರಂದು ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಎರಡು ದಿನಗಳೂ ಎಲ್ಲರಿಗೂ ಹೆಮ್ಮಯ ವಿಷಯವಾಗಿದೆ ಎಂದರು.


ಶ್ರೀ ಶಿವಣ್ಣ ತಾತ, ಶ್ರೀ ಸದ್ದಯ್ಯ ತಾತ, ಪಿಐ ಕೆ.ಹೊಸಕೇರಪ್ಪ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ಪ್ರ. ಕಾರ್ಯದರ್ಶಿ ನರಸಣ್ಣ ನೀಲವಂಜಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಅಯ್ಯಪ್ಪ ಕೊಂಗಂಡಿ ಇತರರಿದ್ದರು.