ರಾಯಬಾಗದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ನಿರ್ಮಿಸಲು ಶಾಸಕ ಶ್ರೀಮಂತ ಪಾಟೀಲ 10 ಲಕ್ಷ ರೂ. ಚೆಕ್ ವಿತರಿಸಿದರು. ಸಿದ್ಧಸಿರಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಶ್ರೀನಿವಾಸ ಪಾಟೀಲ ಇತರರಿದ್ದರು. 
ಜಿಲ್ಲೆ

ರಾಯಣ್ಣ ಮೂರ್ತಿ ತಯಾರಿಸಲು 10 ಲಕ್ಷ ರೂ.

ಕಾಗವಾಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಶ್ರೀಮಂತ ಪಾಟೀಲ 10 ಲಕ್ಷ ರೂ. ಚೆಕ್ ವಿತರಿಸಿದರು.
ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಶ್ರೀಮಂತ ಪಾಟೀಲ ೌಂಡೇಷನ್ ವತಿಯಿಂದ ಕುರುಬ ಸಮುದಾಯ ಮುಖಂಡರ ಸಮ್ಮುಖದಲ್ಲಿ ಸಿದ್ಧಸಿರಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರಿಗೆ ಚೆಕ್ ವಿತರಿಸಲಾಯಿತು.

ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಮೂರ್ತಿ ನಿರ್ಮಿಸಲು ಮಹಾರಾಜರು ಹಾಗೂ ಸಮುದಾಯದ ಬಾಂಧವರು ಸೂಚಿಸಿದ ಸ್ಥಳದಲ್ಲಿ ಸುಂದರವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಎಲ್ಲರೂ ಸೇರಿ ಪ್ರತಿಷ್ಠಾಪಿಸೋಣ. ಹಾಲುಮತದ ಸಮುದಾಯದವರಿಗೆ ಸಭೆ-ಸಮಾರಂಭ ಮಾಡಲು ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರ ಈಗಾಗಲೇ 3 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು. ಚೆಕ್ ಸ್ವೀಕರಿಸಿದ ಸಿದ್ಧಸಿರಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಶಾಸಕರು ಎಲ್ಲ ಸಮಾಜದವರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕುರುಬ ಸಮುದಾಯದವರು ಸೂಚಿಸಿದ ಸ್ಥಳಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತದೆ ಎಂದು ಶಾಸಕರು ತಿಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಮುಖಂಡರಾದ ಶ್ರೀನಿವಾಸ ಪಾಟೀಲ, ರಾಮು ಸೊಡ್ಡಿ, ವಿಜಯ ಖನ್ನಿಖೋಡಿ, ಸದಾಸಿವ ಪೂಜಾರಿ, ದಾದಾ ಶಿಂಧೆ, ಬಾಬುರಾವ ಮಿಂದಿಗೇರಿ, ಬೀರಪ್ಪ ಉಗಾರೆ, ಅಬ್ದುಲ್ ಮುಲ್ಲಾ, ಮುರಗೆಪ್ಪ ಮಗದುಮ್ಮ ಇತರರಿದ್ದರು.