ಜಿಲ್ಲೆ

ರಾಯಣ್ಣ ಇಂದಿಗೂ ಸ್ಪೂರ್ತಿಯ ಸೆಲೆ

StartFragment

ಗಜೇಂದ್ರಗಡ: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಅಪ್ಪಟ ದೇಶಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇಂದಿಗೂ ಸರ್ವರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಕನಕಗುರು ಪೀಠ ಶಾಖಾಮಠ ಬಾದಿಮನಾಳದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಕರವೇ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 189ನೇ ಹುತಾತ್ಮ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ‘ರಾಯಣ್ಣ ಗೌರವ’ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ದೇಶದ ಇತಿಹಾಸ ಪುಟಗಳನ್ನು ಮೆಲುಕು ಹಾಕಿದಾಗ ರಾಜ್ಯದ ನೆಲ, ಜಲ, ನುಡಿ, ಭಾಷೆ, ಗಡಿ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದಲ್ಲಿ ಪ್ರಾದೇಶಿಕ ನಾಯಕರು ಮುಂಚೂಣಿಯಲ್ಲಿದ್ದರು. ಹೀಗಾಗಿ ನಮ್ಮ ಅಸ್ಮಿತೆ ಕಾಪಾಡಲು ಹೋರಾಟ ನಡೆಸುವವರ ಜೊತೆಗೆ ನಾವೆಲ್ಲರೂ ನಿಲ್ಲಬೇಕಿದೆ ಎಂದರು.

ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ, ಟಕ್ಕೇದ ದರ್ಗಾದ ಸೈಯದ್ ನಿಜಾಮುದ್ದೀನ್ ಷಾ ಮಾತನಾಡಿದರು.

ಪತ್ರಕರ್ತ ಎಸ್.ಎಂ. ಸೈಯ್ಯದ್, ಶಾಂತಕುಮಾರ ಹಂಪಿ, ಅಶೋಕ ಬೇವಿನಕಟ್ಟಿ, ಶರಣಪ್ಪ ಶಿಂಗಾಡಿ, ಎಸ್.ಎ. ಜಿಗಳೂರು, ಪಿ.ಎಸ್. ಪಾಟೀಲ ಸೇರಿ 36 ಜನರಿಗೆ ‘ರಾಯಣ್ಣ ಗೌರವ’ ಪುರಸ್ಕಾರ ನೀಡಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರು, ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ, ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಅಶೋಕ ಬಾಗಮಾರ, ಸುರೇಂದ್ರಸಾ ರಾಯಬಾಗಿ, ಡಾ. ಶಿವಪ್ಪ ಕುರಿ, ಅಶೋಕ ಬೇವಿನಕಟ್ಟಿ, ವೀರಣ್ಣ ಅಂಗಡಿ, ರಾಜು ಸಾಂಗ್ಲೀಕರ, ವೀರಣ್ಣ ಶೆಟ್ಟರ್, ಪ್ರಶಾಂತ ರಾಠೋಡ, ರಜಾಕ ಡಾಲಾಯತ, ಅರ್ಜುನ ರಾಠೋಡ, ವೀರೇಶ ಸಂಗಮದ, ಅನೀಲ ಕರ್ಣೆ, ರವಿ ಗುಗಲೋತ್ತರ ಇತರರಿದ್ದರು.

EndFragment