ಬಸವಕಲ್ಯಾಣ: ರಾಮಾಯಣ ರಚಿಸುವ ಮೂಲಕ ಶ್ರೀ ಮಹಷರ್ಿ ವಾಲ್ಮೀಕಿ ಅವರು ಜಗತ್ತಿಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಆದರ್ಶ ಸಮಾಜದ ಸೂತ್ರಗಳು ಈ ಪವಿತ್ರ ಗ್ರಂಥದಲ್ಲಿದ್ದು, ಪಾಲನೆ ಮಾಡುವ ಮೂಲಕ ಉತ್ತಮ ಸಮಾಜದ ನಿಮರ್ಾಣ ಸಾಧ್ಯ ಎಂದು ಶಾಸಕ ಶರಣು ಸಲಗರ ಹೇಳಿದರು.
ಮೋರಖಂಡಿ ಗ್ರಾಮದಲ್ಲಿ ಭಾನುವಾರ ಶ್ರೀ ಮಹಷರ್ಿ ವಾಲ್ಮೀಕಿ ಮೂತರ್ಿ ಅನಾವರಣಗೊಳಿಸಿದ ನಂತರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೋಕರಿ ಕೋಲಿ ಹಿಂದುಳಿದ ಸಮಾಜವಾಗಿದೆ. ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಸವಕಲ್ಯಾಣ ಸಾಮಾನ್ಯ ಕ್ಷೇತ್ರದಲ್ಲಿ ಹಿಂದುಳಿದ ಸಮಾಜದ ಮುಖಂಡರಾಗಿದ್ದ ದಿ.ನಾರಾಯಣರಾವ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೆ ಅವರ ಅಭಿವೃದ್ಧಿಪರ ಕಾರ್ಯ ಮತ್ತು ಹಿಂದುಳಿದ ಸಮಾಜದವರ ಪರ ಹೋರಾಟ ಕಾರಣ. ಅನುಭವ ಮಂಟಪ ನಿಮರ್ಾಣ ಅವರ ಕನಸಾಗಿತ್ತು. ಸಮಾಜದ ಬಗ್ಗೆ ಅವರಿಗಿದ್ದ ಕಾಳಜಿ, ಅವರ ನಿರಂತರ ಹೋರಾಟ ಮತ್ತು ಬದುಕು ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.
ಮಹಾರಾಷ್ಟ್ರ ಸಾರಿಗೆ ಅಧಿಕಾರಿ, ಸಮಾಜದ ಹಿರಿಯ ಮುಖಂಡ ಸಂಜಯ ವಾಡೇಕರ್, ಕನರ್ಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ, ಟೋಕರಿ ಕೋಲಿ ಸಮಾಜ ಜಿಲ್ಲಾ ಅಧ್ಯಕ್ಷ ಜಗನ್ನಾಥ ಜಮಾದಾರ, ಪ್ರಮುಖರಾದ ಮಾಲಾ ನಾರಾಯಣರಾವ, ಬಜರಂಗ ದಾದಾ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಗೋವಿಂದ ಮೇತ್ರೆ, ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಮಂಠಾಳೆ, ಮುಖಂಡರಾದ ಈಶ್ವರ ಬೊಕ್ಕೆ, ಮಲ್ಲಿಕಾಜರ್ುನ ಬೊಕ್ಕೆ, ಮಾಧವರಾವ ಹಸೂರೆ, ಅಮೃತಸಿಂಗ್ ಧಾಮಿ, ಶಿವರಾಜ ಕುಂಟೆಗಾಂವೆ, ದತ್ತು ಚಿಟ್ಟಂಪಲ್ಲೆ, ದತ್ತು ಪಸರಕರೆ, ಮಾರುತಿ ಸೂರ್ಯವಂಶಿ, ಸಂಜೀವ ಗಾಯಕವಾಡ, ಗುರುನಾಥ ಸೋಣಕೆ, ಬಸವರಾಜ ಉಸ್ತುರೆ, ಬಾಲಾಜಿ ಡೊಲ್ಲೆ, ಪಾಂಡುರಂಗ ನಿಂಗಾಲೆ, ಬಸವರಾಜ ಪಾಟೀಲ್, ಸಂದೀಪ ಜಾಧವ್, ಪಾಂಡುರಂಗ ಗುರೂಜಿ, ಬಾಲಾಜಿ ಸಿಂಧೆ, ಜಗನ್ನಾಥ ಪಸರಕರೆ, ಮಾರುತಿ ಭಂಡಾರೆ ಇತರರಿದ್ದರು.
ಟೋಕರಿ ಕೋಲಿ ಸಮಾಜ ಶೈಕ್ಷಣಿಕವಾಗಿ ತೀರ ಹಿಂದುಳಿದಿದೆ. ವಿದ್ಯಾಥರ್ಿಗಳು ಜಾತಿ ಪ್ರಮಾಣಪತ್ರ ಪಡೆಯುವುದಕ್ಕಾಗಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತಿದೆ. ಇದನ್ನು ಬಗೆಹರಿಸಲು ಸಕರ್ಾರ, ಶಾಸಕರು ಕ್ರಮ ಕೈಗೊಳ್ಳಬೇಕು.
|ಸಂಜಯ ವಾಡೇಕರ್, ಕೋಲಿ ಸಮಾಜ ಮುಖಂಡ