ನವಲಗುಂದ: ಐತಿಹಾಸಿಕ ಹಿನ್ನೆಲೆಯ ನವಲಗುಂದ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಿಂಗ ಕಾಮಣ್ಣನ ದರ್ಶನಕ್ಕಾಗಿ ಭಾನುವಾರ ಲಕ್ಷಾಂತರು ಭಕ್ತರು ಆಗಮಿಸಿದ್ದರು.
ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ, ರಾಣೆಬೆನ್ನೂರ, ಬೆಳಗಾವಿ, ವಿಜಯಪುರ, ರಾಯಚೂರ, ಕಲಬá-ರಗಿ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಸುಡá-ಬಿಸಿಲನ್ನೂ ಲೆಕ್ಕಿಸದೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.
ಭಾವೈಕ್ಯತೆ ಸಂಕೇತವಾಗಿರá-ವ ರಾಮಲಿಂಗ ಕಾಮಣ್ಣನಿಗೆ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ವಸ್ತುಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಕಂಕಣ ಭಾಗ್ಯಕ್ಕಾಗಿ ಬೆಳ್ಳಿ ಬಾಸಿಂಗ, ಆಸರೆಗಾಗಿ ಛತ್ರಿ, ಚಾಮರ, ಸಂತಾನ ಭಾಗ್ಯಕ್ಕಾಗಿ ತೊಟ್ಟಿಲು, ಆರೋಗ್ಯಕ್ಕಾಗಿ ಕುದುರೆ, ಹಸ್ತ, ಪಾದುಕೆ, ಗಂಡು ಮಕ್ಕಳಿಗಾಗಿ ಮೀಸೆ, ಗುಣಗಡಗಿ, ದೃಷ್ಟಿ ಪಡೆಯಲು ಕಣ್ಣು ಹೀಗೆ ಬೆಳ್ಳಿ ವಸ್ತುಗಳು, ತೆಂಗಿನಕಾಯಿ, ಕರ್ಪರ, ಊದುಬತ್ತಿ, ಹೂವಿನ ಮಾಲೆ, ಮತ್ತಿತರ ಪೂಜಾ ಸಾಮಗ್ರಿಯನ್ನು ದೇವರಿಗೆ ಸಲ್ಲಿಸಿದರು.
ಸರದಿಯಲ್ಲಿ ನಿಂತ ಭಕ್ತರಿಗೆ ರಾಮಲಿಂಗ ಕಾಮಣ್ಣನ ಅಭಿಮಾನಿ ಬಳಗ, ಯುವಕ ಸಂಘಗಳು, ಆಡಳಿತ ಮಂಡಳಿ ತಂಪು ಪಾನೀಯ, ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಪಟ್ಟಣದಲ್ಲಿ ಮಾ. 9ರಂದು ಹೋಳಿ ಹಬ್ಬ ಆಚರಿಸಲಾಗá-ವುದು. ಈ ಹಿನ್ನೆಲೆ ಯಲ್ಲಿ ರಾಮಲಿಂಗ ಕಾಮದೇವನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಲಿದೆ. ಮಂಗಳವಾರ ಬಣ್ಣದೋಕುಳಿ ನಡೆಯಲಿದೆ. ಹಿಂದು-ಮುಸ್ಲಿಂ ಭೇದ-ಭಾವವಿಲ್ಲದೇ ಯುವಕ, ಯುವತಿಯರು, ಹಿರಿಯರು, ಮಕ್ಕಳು ಪಾಲ್ಗೊಡು ಹಬ್ಬ ಆಚರಿಸá-ತ್ತಾರೆ.
11 ಕಾಮಣ್ಣರ ಮೆರವಣಿಗೆ, ದಹನ: ಪಟ್ಟಣದ ವಿವಿಧ ಓಣಿಗಳಲ್ಲಿ ಪ್ರತಿಷ್ಠಾಪನಗೊಂಡ 14 ಕಾಮಣ್ಣರ ಮೂರ್ತಿಗಳ ಮೆರವಣಿಗೆ ಪ್ರಮá-ಖ ರಸ್ತೆಗಳಲ್ಲಿ ನಡೆಯಲಿದೆ. ಅಂಬೇಡ್ಕರ್ ನಗರದ ಎರಡು ಕಾಮಣ್ಣ ಮೂರ್ತಿಗಳ ಮೆರವಣಿಗೆ ಮೊದಲು ಪ್ರಾರಂಭವಾಗಲಿದೆ. ಆನಂತರ ಗೌಡರ ಓಣಿ, ತೆಗ್ಗಿನಕೇರಿ ಓಣಿ, ಸಿದ್ದಾಪುರ ಓಣಿ, ರೈತರ ಕಾಮಣ್ಣ, ಸರ್ಕಾರ ಕಾಮಣ್ಣ, ಭಯ್ಯಾರ ಕಾಮಣ್ಣ, ಗ್ರಾಮದೇವಿ ಚವಡಿ ಕಾಮಣ್ಣ ಮೂರ್ತಿಗಳು ಮೆರವಣಿಗೆ ಮೂಲಕ ಆಗಮಿಸಿ ರಾಮಲಿಂಗ ಕಾಮಣ್ಣನ ದರ್ಶನ ಪಡೆದು ತಮ್ಮ ಮೂಲ ಸ್ಥಳಕ್ಕೆ ತೆರಳಿ ದಹನವಾಗುತ್ತವೆ. ರಾಮಲಿಂಗ ಕಾಮದೇವನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತೊಂದರೆ ಆಗದಂತೆ ಹಾಗೂ ಪಟ್ಟಣದಲ್ಲಿ ಅಶಾಂತಿ ಉಂಟಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಅಣ್ಣಿಗೇರಿಯಲ್ಲಿ ಬಣ್ಣದೋಕುಳಿ ನಾಳೆ: ಅಣ್ಣಿಗೇರಿಯಲ್ಲಿ ಮಾ. 9ರಂದು ಹೋಳಿ ಹುಣ್ಣಿಮೆ, 10ರಂದು ಬಣ್ಣದೋಕುಳಿ ಜರá-ಗಲಿದೆ. ಈ ಹಿನ್ನೆಲೆಯಲ್ಲಿ ರತಿ-ಮನ್ಮಥರ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯ ಭರದಿಂದ ಸಾಗಿದೆ. ಹೊರಕೇರಿ ಓಣಿ, ಹೊಸಪೇಟಿ ಓಣಿಗಳಲ್ಲಿ ವಿಶಿಷ್ಟವಾಗಿ ಚಕ್ಕಡಿ ಬಂಡಿ, ಹುಲಗಾಮನನ್ನು ತಯಾರಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಪ್ರತಿಷ್ಠಾಪಿಸಿದ ಸ್ಥಳಕ್ಕೆ ಕಾಮಣ್ಣನ ಬಂಡಿ ಮರಳಿದ ಬಳಿಕ ಪಟ್ಟಣದಲ್ಲಿ ಬಣ್ಣದಾಟ ಪ್ರಾರಂಭವಾಗುತ್ತದೆ. ಯುವಕರು ಕದ್ದು ತಂದ ಕುಳ್ಳು ಕಟ್ಟಿಗೆಗಳನ್ನು ಒಂದಡೆ ರಾಶಿ ಹಾಕಿ ಮಧ್ಯ ರತಿ ಮನ್ಮಥರ ಭಾವಚಿತ್ರವಿಟ್ಟು ಅಗ್ನಿ ಸ್ಪರ್ಶ ಮಾಡುತ್ತಾರೆ. ಹೀಗೆ ಪಟ್ಟಣದ ವಿವಿಧೆಡೆ ಒಂದೊಂದಾಗಿ ಕಾಮಣ್ಣನ ಮೂರ್ತಿಗಳನ್ನು ದಹನ ಮಾಡುತ್ತಾರೆ. ಕಾಮನ ಕಿಚ್ಚನ್ನು ಮನೆಗೆ ತಂದು ಕುಸುಬಿ, ಕಡಲೆ ಸುಟ್ಟು ತಿನ್ನುತ್ತಾರೆ.
ರಾಮಲಿಂಗ ಕಾಮದೇವರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮಯಿ. ನಾನು ಮೂರು ವರ್ಷಗಳ ಹಿಂದೆ ಮದುವೆ ಸಲುವಾಗಿ ಬೇಡಿಕೊಂಡಿದ್ದೆ. 2ನೇ ವರ್ಷ ನೌಕರಿಗಾಗಿ ಮತ್ತು ಈ ವರ್ಷ ಆಸರೆ ಕಲ್ಪಿಸಿಕೊಳ್ಳುವುದಕ್ಕಾಗಿ ಬೆಳ್ಳಿ ವಸ್ತುಗಳನ್ನು ಖರೀದಿಸಿ ದೇವರಿಗೆ ಅರ್ಪಿಸಿದ್ದೇನೆ. ಎಲ್ಲ ಬೇಡಿಕೆಗಳು ಈಡೇರುತ್ತ ಬಂದಿವೆ. ಇಷ್ಟಾರ್ಥಗಳು ಈಡೇರಿಸಿಕೊಂಡಿದ್ದರಿಂದ ನನ್ನ ಜೊತೆಗೆ ಹದಿನೈದು ಸ್ನೇಹಿತೆಯರನ್ನು ದೇವರ ದರ್ಶನಕ್ಕಾಗಿ ಕರೆದುಕೊಂಡು ಬಂದಿದ್ದೇನೆ. | ಸೌಮ್ಯಾ ರಾಣೆಬೆನ್ನೂರ ರಾಣೆಬೆನ್ನೂರ ಭಕ್ತೆ
ನವಲಗುಂದ ರಾಮಲಿಂಗ ಕಾಮಣ್ಣ ದೇವರ ದರ್ಶನಕ್ಕೆ ಕಳೆದ ವರ್ಷದಿಂದ ಬರುತ್ತಿದ್ದೇನೆ. ಆರಂಭದಲ್ಲಿ ಮನೆ ಸಲುವಾಗಿ, ಈ ವರ್ಷ ಮಕ್ಕಳ ನೌಕರಿಗಾಗಿ ಬಂದಿದ್ದೇನೆ. ನಾವು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿವೆ. ರಾಮಲಿಂಗ ಕಾಮದೇವನ ಕೃಪೆಯಿಂದ ನಮ್ಮ ಕುಟುಂಬ ಚೆನ್ನಾಗಿ ಸಾಗಿದೆ. | ಜ್ಞಾನದೇವ ವಿಜಯಪುರ ಭಕ್ತ