ಜಿಲ್ಲೆ

ರಾಮರಾಜ್ಯಕ್ಕೂ ಮುನ್ನ ರಾಮಮಂದಿರ ಸ್ಥಾಪನೆಯಾಗಲಿ

ಹೊನ್ನಾವರ: ಮಾನವ ಜನ್ಮ ಸಾರ್ಥಕವಾಗಬೇಕಾದರೆ ರಾಮತತ್ವ ಹಾಗೂ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ರ್ಕಯ ದೈವಜ್ಞ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ರಘುಚಂದ್ರ ಸಭಾಗೃಹದಲ್ಲಿ ವಿಶ್ವ ಹಿಂದು ಪರಿಷತ್ ಶುಕ್ರವಾರ ಸಂಜೆ ಆಯೋಜಿಸಿದ್ದ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀರಾಮ ಮಂದಿರ ನಿರ್ವಣದ ಹಿಂದೆ ಅನೇಕ ಕಷ್ಟ,ನಷ್ಟಗಳನ್ನು ಅನುಭವಿಸಿದ್ದೇವೆ. ರಾಮ ರಾಜ್ಯ ಸ್ಥಾಪನೆ ಆಗುವ ಮೊದಲು ಶ್ರೀ ರಾಮಮಂದಿರ ಸ್ಥಾಪನೆಯಾಗಬೇಕು. ರಾಮನನ್ನು ಅನಾಧಿ ಕಾಲದಿಂದ ನಾವೆಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೇವೆ. ಶ್ರೀ ರಾಮನ ಭವ್ಯ, ದಿವ್ಯ ರಾಮ ಮಂದಿರ ನಿರ್ವಣದ ಸಂತೋಷದ ಕ್ಷಣದಲ್ಲಿ ನಾವಿದ್ದೇವೆ. ರಾಮಮಂದಿರ ನಿರ್ವಣಕ್ಕೆ ಎಲ್ಲ ವರ್ಗದವರ ಶ್ರಮದ ಹಣ ವಿನಿಯೋಗವಾಗಬೇಕು ಎನ್ನುವ ಮಹದಾಸೆಯಿಂದ ನಿಧಿ ಸಮರ್ಪಣಾ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಸಾಹಿತ್ಯವನ್ನು ಬಿಡುಗಡೆಗೊಳಿಸಲಾಯಿತು. ಶ್ರೀಗಳು ಅಭಿಯಾನಕ್ಕೆ ಮಠದ ವತಿಯಿಂದ ನಿಧಿ ಸಮರ್ಪಿಸಿದರು. ಕಲಾವಿದ ನಾಗರಾಜ ಗುನಗಾ ಇವರನ್ನು ಶ್ರೀಗಳು ಸನ್ಮಾನಿಸಿದರು.

ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ್ಯದ ಸಂಘಟನಾ ಪ್ರಮುಖ ಮಹಾಬಲೇಶ್ವರ ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಸಕ ಸುನೀಲ ನಾಯ್ಕ, ವಿಶ್ವ ಹಿಂದು ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಡಿ. ನಾಯ್ಕ, ಜ್ಞಾನೇಶ್ವರಿ ಪೀಠದ ಪ್ರಮುಖ ಆರ್.ಎಸ್. ರಾಯ್ಕರ್, ಹಿಂದುಪರ ಸಂಘಟನೆಯ ಪ್ರಮುಖ ಎಸ್.ಟಿ. ನಾಯ್ಕ, ಪತಂಜಲಿ ವೀಣಾಕರ್ ಉಪಸ್ಥಿತರಿದ್ದರು. ಸಂಜಯ ಶೇಟ್ ಸ್ವಾಗತಿಸಿದರು, ಎನ್.ಎಸ್. ಹೆಗಡೆ ರ್ಕ ವಂದಿಸಿದರು. ವಿಶ್ವನಾಥ ನಾಯಕ ಕಾರ್ಯಕ್ರಮ ನಿರ್ವಹಿಸಿದರು.