ಬಳ್ಳಾರಿ : ಇಲ್ಲಿನ ನೂತನ ನ್ಯಾಯಾಲಯದ ಸಂಕೀರ್ಣ ಆವರಣದಲ್ಲಿ ನಡೆದ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪದಾಧಿಕಾರಿಗಳ ಚುನಾವಣೆಯ ಫಲಿತಾಂಶ ಶನಿವಾರ ತಡರಾತ್ರಿ ಹೊರಬಂದಿದೆ. ಚುನಾವಣೆಯಲ್ಲಿ ವಕೀಲರಾದ ಎಲ್.ಟಿ.ಶೇಖರ್ ನೇತೃತ್ವದ ಎ ತಂಡ ಹಾಗೂ ರಾಮಬ್ರಹ್ಮಂ ಅವರ ಬಿ ತಂಡದ ನಡುವೆ
ಸ್ಪರ್ಧೆ ಏರ್ಪಟ್ಟಿತ್ತು. ರಾಮಬ್ರಹ್ಮಂ ಅವರ ತಂಡ ಭರ್ಜರಿ ಗೆಲುವು ಸಾಧಿಸಿದೆ. ರಾಮ ಬ್ರಹ್ಮಂ ಅಧ್ಯಕ್ಷರಾಗಿ, ಯಶೋಧರ ಮೂರ್ತಿ ಉಪಾಧ್ಯಕ್ಷ, ಅನ್ಸರ್ ಬಾಷಾ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಎರ್ರೆಮ್ಮ, ಖಜಾಂಚಿ ಕರೂರು ಬಸವರಾಜ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖಣ್ಣ, ಇರ್ಫಾನ್ , ಟಿ. ನಾಗನಗೌಡ , ರಾಘವೇಂದ್ರ ಮೋಹನ್ , ಬಸರೆಡ್ಡಿ , ಹೆಚ್.ಹುಲುಗಪ್ಪ, ಎಂ.ಕೆ. ಮೂರ್ತಿ, ಗೋವಿಂದಪ್ಪ, ಶೇಖಪ್ಪ, ಡಿ. ಮಲ್ಲಿಕಾರ್ಜುನ ಆಯ್ಕೆಯಾದರು. ಚುನಾವಣೆಯ ಫಲಿತಾಂಶವನ್ನು ಚುನಾವಣೆ ಅಧಿಕಾರಿ ವೆಂಕಟೇಶ್ವರ ರೆಡ್ಡಿ ಪ್ರಕಟಿಸಿದರು.