ಜಿಲ್ಲೆ

ರಾಮಪಾಲ ಭಕ್ತರ ರಕ್ಷಣೆಗೆ ಜಿಲ್ಲಾಧಿಕಾರಿ ಕ್ರಮವಹಿಸಲಿ

ಧರ್ಮರಾಜ ರಾಮನಗೌಡ ಪಾಟೀಲ

ಸಂಬರಗಿ: ರಾಮಪಾಲ ಮಹಾರಾಜರ ಆರಾಧನೆಯಲ್ಲಿ ತೊಡಗಿ ಪ್ರಾಣತ್ಯಾಗ ಮಾಡುವುದಾಗಿ ಹೇಳಿದ್ದ, ಇರಕರ ಕುಟುಂಬಸ್ಥರ ಮನೆಗೆ ಗುರುವಾರ ರಾಷ್ಟ್ರೀಯ ಮಾನವ ಹಕ್ಕು ತನಿಖಾ ಸಮಿತಿ ಕಾನೂನು ಸಲಹೆಗಾರ ವಿಷ್ಣು ಕುಲಕರ್ಣಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಇರಕರ ಕುಟುಂಬ ಭಕ್ತಿಯ ಹೆಸರಿನಲ್ಲಿ ಅಂಧಶ್ರದ್ಧೆಗೆ ಒಳಗಾಗಿದ್ದು, ಅವರು ಏನಾದರೂ ತಪ್ಪು ನಿರ್ಣಯ ಕೈಗೊಳ್ಳುವ ಮುನ್ನ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸಾಂಗಲಿ, ಕೊಲ್ಲಾಪುರ, ವಿಜಯಪುರ ಜಿಲ್ಲೆಯಿಂದ ಬಂದಿದ್ದ ರಾಮಪಾಲ ಮಹಾರಾಜರ ಭಕ್ತರು, ಇರಕರ ಕುಟುಂಬದವರನ್ನು ಭೇಟಿ ಮಾಡಿ, ಆರೋಗ್ಯಕರ ಆಹಾರ ಸೇವಿಸಿ, ಸಮಾಜ ಸೇವೆ ಮಾಡಿ, ಕಾಯಕದಲ್ಲಿ ತೊಡಗಿರಿ, ಅದುವೇ ನಿಜವಾದ ಭಕ್ತಿ ಎಂದು ತಿಳಿಹೇಳಿದರು.

ವೈದ್ಯಾಧಿಕಾರಿ ಶಿವರಾಜ ಹರೂಲಿ, ಇರಕರ ಕುಟುಂಬಸ್ಥರ ಆರೋಗ್ಯ ಪರಿಶೀಲನೆ ನಡೆಸಿ ಮಾತನಾಡಿ, ನಾವು ಕೊಟ್ಟಿರುವ ಔಷಧವನ್ನೂ ಭಕ್ತರು ಸೇವಿಸುತ್ತಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇವೆ ಎಂದರು.

ವಕೀರಾದ ಎಸ್.ಎಸ್.ಪಾಟೀಲ, ಶ್ರೀಶೈಲ ಮೇತ್ರಿ, ಅಮುಲ ನಾಗಾನವರ, ಬೆಳಗಾವಿ ಜಿಲ್ಲಾ ಮಾನವ ಹಕ್ಕು ತನಿಖಾ ಸಮಿತಿ ಅಧ್ಯಕ್ಷ ಅಶೋಕ ಮಲ್ಲೂರ, ಮಹಾನಂದಾ ದೊಡಮನಿ, ವಿಶಾಲ ಪೂಜಾರಿ ಇತರರಿದ್ದರು.