ಚಿಕ್ಕಮಗಳೂರು: ಸಂತವೇರಿ ಬಿಎಂಇ ಕ್ರೀಡಾಂಗಣದಲ್ಲಿ ನಡೆದ ಬ್ಲೂ ಮೌಂಟೇನ್ ಟ್ರೋಫಿ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ರಾಮನಹಳ್ಳಿ ವಿನಿ ಸ್ಟಾರ್ ತಂಡ ಪ್ರಥಮ ಸ್ಥಾನ ಪಡೆಯಿತು. ಸಂತವೇರಿ ಎಫ್ವೈಸಿಸಿ ತಂಡ ದ್ವಿತೀಯ, ಹೊಸಪೇಟೆ ಸೂಪರ್ ಸ್ಟಾರ್ ತಂಡ ತೃತೀಯ, ಕೈಮರ ನ್ಯೂ-11 ತಂಡ ನಾಲ್ಕನೇ ಸ್ಥಾನ ಗಳಿಸಿದವು.
ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಎಂ.ಗೋಪಿಕೃಷ್ಣ, ಕ್ರೀಡೆಯಲ್ಲಿ ಸೋಲು- ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಗ್ರಾಮೀಣ ಕ್ರೀಡೆಗಳು ನಶಿಸಿಹೋಗುತ್ತಿರುವ ಈ ಸಂದರ್ಭದಲ್ಲಿ ಸಂತವೇರಿಯ ಬಿಎಂಇ ತಂಡ ಕ್ರೀಡೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡುವುದಾಗಿ ತಿಳಿಸಿದರು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ವಿನಿ ಸ್ಟಾರ್ ತಂಡದ ನಾಯಕ ರವಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಿನಿ ಸ್ಟಾರ್ ತಂಡದ ಫಯಾಜ್, ಬೆಸ್ಟ್ ಬೌಲರ್ ಸೂಪರ್ ಸ್ಟಾರ್ ತಂಡದ ರಕ್ಷಿತ್, ಬೆಸ್ಟ್ ಬ್ಯಾಟ್ಸ್ಮನ್ ಎಫ್ವೈಸಿಸಿ ತಂಡದ ಶ್ರೀಧರ್ ಪಡೆದರು. ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಗ್ರಾಪಂ ಅಧ್ಯಕ್ಷೆ ಸರಸ್ವತಿ ಲೋಕೇಶ್, ರಚನಾ ಶ್ರೀನಿವಾಸ್ ಕಾಮನದುರ್ಗ, ಸದಸ್ಯ ಡಿ.ಜನಾರ್ದನ್, ಬಿಎಂಇ ವ್ಯವಸ್ಥಾಪಕ ಜೀವನ್, ಬೆಳ್ಳಿಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ದೇವರಾಜ್, ಉಪ ವಲಯ ಅರಣ್ಯಾಧಿಕಾರಿ ಬಿ.ಜಗದೀಶ್, ಅರಣ್ಯ ರಕ್ಷಕ ಸಂತೋಷ್ ತಳವಾರ್, ಎಫ್ವೈಸಿಸಿ ಹಿರಿಯ ಆಟಗಾರರಾದ ಧರ್ಮಲಿಂಗಂ, ಜಾನ್ಸನ್, ಮೋಹನ್ಕುಮಾರ್, ಡಿ.ಮಂಜು, ವಿನೋದ್ ಇದ್ದರು.