ಕಕ್ಕೇರಿ: ಮುಸ್ಲಿಂ ಸಮುದಾಯದವರು ದೇಶದಲ್ಲಿ ಸೌಹಾರ್ದದಿಂದ ಬಾಳುತ್ತಿದ್ದೇವೆ. ನಮ್ಮಲ್ಲಿ ಬಿರುಕು ಹುಟ್ಟಿಸಲು ಮಹಾರಾಷ್ಟ್ರದ ರಾಮಗಿರಿ ಮಹಾರಾಜರು ಸ್ವಾರ್ಥಕ್ಕೋಸ್ಕರ ಮಹಮ್ಮದ್ ಪೆಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೆಗೊಳ್ಳಬೇಕೆಂದು ಮೌಲಾನಾ ಅ್ಜಲ್ ಆಗ್ರಹಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಮಗಿರಿ ಮಹಾರಾಜರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು.
ನಾವು ರಾಮಗಿರಿ ಮಹಾರಾಜರ ಹೇಳಿಕೆ ಖಂಡಿಸುತ್ತೇವೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೆಗೊಳ್ಳುವಂತೆ ಒತ್ತಾಯಿಸಿದರು. ಸಬ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಮುಖಂಡರಾದ ನಾಸೀರ್ ಬಾಗವಾನ್, ರಿಯಾಜ್ ಪಟೇಲ್, ಕಾಶೀಂ ಹಟ್ಟಿಹೊಳಿ, ಅಲ್ತ್ಾ ಬಸರಿಕಟ್ಟಿ, ಬಶೀರ್ ಮನಿಯಾರ್, ಅಬ್ದುಲ್ ಹುದಲಿ, ಸಾಧಿಕ್ ನಂದಗಡಿ, ಮೌಲಾನಾ ಆರ್ೀ, ಮೌಲನಾ ಇಮ್ತಿಯಾಜ್, ಮೌಲಾನಾ ತೌಫಿಕ್, ಮೌಲನಾ ನವೀದ್, ಹಾಫಿಜ್ ಮೆಹಬೂಬ್ ಸುಭಾನಿ, ಮಕ್ತುಮ್ ಸಾಹುಕಾರ, ಅಷ್ಪಾಕ್ ಪಟೇಲ್, ಗುಡ್ಡು ತೆಕಡಿ, ತೋಹೀದ್ ಚಾಂದಖಾನವರ, ಇಸಾಕ್ ಖಾನ್ ಪಠಾಣ್ ಇತರರಿದ್ದರು.